ಕನಕಪುರ: ಇಲ್ಲಿನ ರೂರಲ್ ಪದವಿ ಕಾಲೇಜಿನ ದೂಂತೂರು ಮಾರೇಗೌಡ ಸಭಾಂಗಣದಲ್ಲಿ ಎಸ್.ಕರಿಯಪ್ಪ ರೂರಲ್ ಸ್ನಾತಕೋತರ ಪದವಿ ಅಧ್ಯಯನ ಕೇಂದ್ರದಿಂದ ವಿವೇಕಾನಂದ ಜಯಂತಿ ಹಾಗೂ ಯುವ ದಿನಾಚರಣೆ ಸೋಮವಾರ ಆಚರಿಸಲಾಯಿತು.

ಕನಕಪುರ ಆದಿತ್ಯಾಸ್ ಕಾಲೇಜು ಉಪನ್ಯಾಸಕ ಶ್ರೀಧರ್ ಮಾತನಾಡಿ, ಯಾವುದೇ ಉದ್ಯೋಗ ಮಾಡಬೇಕಾದರೂ ನಮಗೆ ಕೌಶಲ ಬೇಕಾಗುತ್ತದೆ. ಅದಕ್ಕಾಗಿ ವೃತ್ತಿ ಕೌಶಲತೆ ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಮುಖ್ಯವಾಗುತ್ತದೆ. ಖಾಸಗಿಯಾಗಲಿ, ಸರ್ಕಾರದಾಗಲಿ, ಸ್ವಯಂ ಉದ್ಯೋಗವಾಗಲಿ ನಾವು ರೂಪಿಸಿಕೊಂಡಾಗ ಮಾತ್ರ ಜೀವನ ರೂಪಿತವಾಗುತ್ತದೆ ಎಂದರು.

ಉಪನ್ಯಾಸಕ ಪಾರ್ಥಸಾರಥಿ ಮಾತನಾಡಿ, ಸಮಾಜದಲ್ಲಿ ಎದರಾಗುವ ಸವಾಲುಗಳಿಗೆ ಎದೆಗುಂದದೆ ವಿವೇಕಾನಂದ ಅವರನ್ನು ಆದರ್ಶವಾಗಿಟ್ಟುಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದರು.

ಆರ್ಇಎಸ್ ನಿರ್ದೇಶಕ ಕೆ.ಬಿ ನಾಗರಾಜು, ವಿವೇಕಾನಂದರ ಆದರ್ಶ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮೊದಲನೇ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಆರ್ಇಎಸ್ ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ರೂರಲ್ ಪದವಿ ಕಾಲೇಜು ಉಪ ಪ್ರಾಂಶುಪಾಲ ಕೆಂಪೇಗೌಡ, ಉಪನ್ಯಾಸಕ ಕೆ.ಪಿ ಪ್ರಕಾಶ್ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.