ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲೂರು: ಪಾಲನೆಯಾಗದ ಸಾಮಾಜಿಕ ಅಂತರ, ಆರೋಪ

Last Updated 10 ಏಪ್ರಿಲ್ 2020, 13:10 IST
ಅಕ್ಷರ ಗಾತ್ರ

ಮಾಗಡಿ: ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಬಳಿ ಇರುವ ಭಾರತ್‌ ಗ್ಯಾಸ್‌ಪ್ಲಾಂಟ್‌ಗೆ ಕೇರಳದಿಂದ ಲಾರಿ ಚಾಲಕರು ಆಗಮಿಸುತ್ತಿದ್ದಾರೆ. ಇದರಿಂದ ಕೊರೊನಾ‌ ಹರಡುವ ಭೀತಿ ಎದುರಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನಾಜಿಯಾ ಖಾನಂ ಜವಾಹರ್‌ ಆರೋಪಿಸಿದರು.

ಗ್ಯಾಸ್‌ಪ್ಲಾಂಟ್‌ನಲ್ಲಿ ಲಾರಿಗಳು ಸಾಲಾಗಿ ನಿಂತಿವೆ ಮತ್ತು ಒಂದೇ ಕೊಠಡಿಯಲ್ಲಿ ಕೇರಳದ ಮಂದಿ ಇದ್ದಾರೆ. ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ ಎಂದು ಹೇಳಿದರು.

ಲಾಕ್‌ಡೌನ್ ಇದ್ದರೂ ಸಹ ಗ್ಯಾಸ್‌ಪ್ಲಾಂಟ್‌ನಿಂದ ತುಂಬಿದ ಸಿಲಿಂಡರ್‌ ಸಾಗಿಸುವುದು ಮತ್ತು ಮಂಗಳೂರಿನಿಂದ ಟ್ಯಾಂಕರ್‌ಗಳ ಮೂಲಕ ನಿತ್ಯ ಗ್ಯಾಸ್‌ ಸರಬರಾಜು ಮಾಡಲಾಗುತ್ತಿದೆ. ಕೇರಳದಿಂದ ಆಗಮಿಸಿರುವ ನೂರಾರು ಲಾರಿಗಳ ಚಾಲಕರು ಇಕ್ಕಟ್ಟಾದ ಒಂದೆ ಕೊಠಡಿಯಲ್ಲಿ ವಾಸವಾಗಿದ್ದಾರೆ. ಚಾಲಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಲ್ಲೂಕು ವೈದ್ಯಾಧಿಕಾರಿಗಳು ಗ್ಯಾಸ್‌ಪ್ಲಾಂಟ್‌ಗೆ ಕೂಡಲೆ ಭೇಟಿ ನೀಡಿ ಕೊರೊನಾ ಹರಡದಂತೆ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ಎಂದೂ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT