ಚನ್ನಪಟ್ಟಣ: ‘ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಶತಸಿದ್ಧ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಬೆಂಬಲಿಗರು, ಹಿತೈಷಿಗಳಿಗೆ ಬಿಟ್ಟಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಸಮಾನ ಮನಸ್ಕರ ವೇದಿಕೆ ಹಾಗೂ ಯೋಗೇಶ್ವರ್ ಅಭಿಮಾನಿ ಬಳಗ ಭಾನುವಾರ ತಾಲ್ಲೂಕಿನ ಕೂಡ್ಲೂರು ಬಳಿಯ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಚನ್ನಪಟ್ಟಣ ಜನತೆ ಉಪ ಚುನಾವಣೆಯಲ್ಲಿ ನನ್ನ ಸ್ಪರ್ಧೆಯನ್ನು ಬಯಸುತ್ತಿದ್ದಾರೆ. ಹೋದ ಕಡೆಯಲ್ಲಿ ಜನ ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಿಮ್ಮ ಜೊತೆ ಇರುತ್ತೇವೆ ಎಂಬ ಆಶ್ವಾಸನೆ ನೀಡುತ್ತಿದ್ದಾರೆ’ ಎಂದರು.

‘ಆಗಸ್ಟ್ 11ರಂದು ತಾಲ್ಲೂಕಿನಲ್ಲಿ ‘ನಮ್ಮ ಶಾಸಕ, ನಮ್ಮ ಹಕ್ಕು’ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಈ ಸಮಾವೇಶ ತಾಲ್ಲೂಕಿನ ರಾಜಕೀಯ ಅಸ್ಮಿತೆ ಮತ್ತು ಸ್ವಾಭಿಮಾನ ತೀರ್ಮಾನಿಸುವ ರಾಜಕೀಯದ ದಿಕ್ಸೂಚಿ ಆಗಲಿದೆ. ನಾನು ರಾಜಕೀಯದಲ್ಲಿ ಮುಂದುವರೆಯುವ ಅಥವಾ ರಾಜಕೀಯ ಬಿಡುವ, ಚುನಾವಣೆಗೆ ಸ್ವರ್ಧಿಸುವ ಇಲ್ಲವೇ ಹಿಂದೆ ಸರಿಯುವ ನಿರ್ಧಾರ ಆ ಸಭೆಯಲ್ಲಿ ಅಂತಿಮವಾಗಲಿದೆ’ ಎಂದು ಹೇಳಿದರು.

‘ನನ್ನ ರಾಜಕೀಯ ಜೀವನದಲ್ಲಿ ಬೆಂಬಲಿಗರು ಹಾಗೂ ಹಿತೈಷಿಗಳ ಪಾತ್ರ ಅಪಾರವಾಗಿದೆ. ಹಾಗಾಗಿ ಮುಂಬರುವ ಉಪ ಚುನಾವಣೆ ವಿಚಾರವಾಗಿ ಅಂದು ನನ್ನ ಬೆಂಬಲಿಗರು ಹಾಗೂ ಹಿತೈಷಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ’ ಎಂದು ಘೋಷಿಸಿದರು.

Cut-off box - ದೆಹಲಿಯಲ್ಲಿ ಅಂತಿಮ ನಿರ್ಧಾರ: ಸಿಪಿವೈ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ನೀರಿಕ್ಷೆ ಇತ್ತು. ಅದಕ್ಕೆ ಪೂರಕ ವಾತಾವರಣವೂ ಇತ್ತು. ಆದರೆ ಕೆಲವು ರಾಜಕೀಯ ಕಾರಣಗಳಿಂದ ಅಪಸ್ಪರ ಕೇಳಿ ಬರುತ್ತಿದೆ. ದೆಹಲಿಯಿಂದ ಅಂತಿಮ ನಿರ್ಧಾರ ಹೊರ ಬೀಳಲಿದೆ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದರು. ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆ ವಿಚಾರವಾಗಿ ಚರ್ಚಿಸಲು ಸಂಸದ ಬಸವರಾಜ ಬೊಮ್ಮಾಯಿ ಭೇಟಿಯಾಗುವಂತೆ ತಿಳಿಸಿದ್ದಾರೆ. ಪಕ್ಷ ಏನೇ ತೀರ್ಮಾನ ತೆಗೆದುಕೊಳ್ಳಲಿ. ಅದಕ್ಕೂ ಮಿಗಿಲಾಗಿ ಅಭಿಮಾನಿಗಳು ಹಿತೈಷಿಗಳು ತೆಗೆದುಕೊಳ್ಳುವ ತೀರ್ಮಾನ ಮುಖ್ಯ ಎಂದು ಸ್ಪಷ್ಟಪಡಿಸಿದರು. ‘ಚುನಾವಣೆಗಳು ನನಗೆ ಹೊಸದಲ್ಲ. ಈವರೆಗೆ ಒಂಬತ್ತು ಚುನಾವಣೆ ಎದುರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವು ರಾಜಕೀಯ ನಿರ್ಧಾರ ತೆಗೆದುಕೊಂಡಾಗಲೂ ತಾಲ್ಲೂಕಿನ ಜನ ನನ್ನ ಜೊತೆ ನಿಂತಿದ್ದಾರೆ. ಇಬ್ಬರು ಪ್ರಬಲರ ನಡುವೆ ತಾಲ್ಲೂಕಿನವನಾದ ನನ್ನನ್ನು ಈಗಲೂ ಕೈಹಿಡಿದು ಮುನ್ನಡೆಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಬಂಡಾಯದ ಸೂಚನೆ ನೀಡಿದರು.

Cut-off box - ದೆಹಲಿಯಲ್ಲಿ ಅಂತಿಮ ನಿರ್ಧಾರ: ಸಿಪಿವೈಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ನೀರಿಕ್ಷೆ ಇತ್ತು. ಅದಕ್ಕೆ ಪೂರಕ ವಾತಾವರಣವೂ ಇತ್ತು. ಆದರೆ ಕೆಲವು ರಾಜಕೀಯ ಕಾರಣಗಳಿಂದ ಅಪಸ್ಪರ ಕೇಳಿ ಬರುತ್ತಿದೆ. ದೆಹಲಿಯಿಂದ ಅಂತಿಮ ನಿರ್ಧಾರ ಹೊರ ಬೀಳಲಿದೆ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದರು.ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆ ವಿಚಾರವಾಗಿ ಚರ್ಚಿಸಲು ಸಂಸದ ಬಸವರಾಜ ಬೊಮ್ಮಾಯಿ ಭೇಟಿಯಾಗುವಂತೆ ತಿಳಿಸಿದ್ದಾರೆ. ಪಕ್ಷ ಏನೇ ತೀರ್ಮಾನ ತೆಗೆದುಕೊಳ್ಳಲಿ. ಅದಕ್ಕೂ ಮಿಗಿಲಾಗಿ ಅಭಿಮಾನಿಗಳು ಹಿತೈಷಿಗಳು ತೆಗೆದುಕೊಳ್ಳುವ ತೀರ್ಮಾನ ಮುಖ್ಯ ಎಂದು ಸ್ಪಷ್ಟಪಡಿಸಿದರು.‘ಚುನಾವಣೆಗಳು ನನಗೆ ಹೊಸದಲ್ಲ. ಈವರೆಗೆ ಒಂಬತ್ತು ಚುನಾವಣೆ ಎದುರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವು ರಾಜಕೀಯ ನಿರ್ಧಾರ ತೆಗೆದುಕೊಂಡಾಗಲೂ ತಾಲ್ಲೂಕಿನ ಜನ ನನ್ನ ಜೊತೆ ನಿಂತಿದ್ದಾರೆ. ಇಬ್ಬರು ಪ್ರಬಲರ ನಡುವೆ ತಾಲ್ಲೂಕಿನವನಾದ ನನ್ನನ್ನು ಈಗಲೂ ಕೈಹಿಡಿದು ಮುನ್ನಡೆಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಬಂಡಾಯದ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.