ಭಾನುವಾರ, ಸೆಪ್ಟೆಂಬರ್ 19, 2021
25 °C

ಚನ್ನಪಟ್ಟಣ: ಮನೆ ಬಾಗಿಲು ಮುರಿದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತಾಲ್ಲೂಕಿನ ಸೋಗಾಲಪಾಳ್ಯ ಗ್ರಾಮದಲ್ಲಿ ಹಾಡಹಗಲೇ ಮನೆಯ ಬಾಗಿಲ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.

ಗ್ರಾಮದ ಚಿಕ್ಕಣ್ಣ ಅವರ ಮಗ ನವೀನ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.

ಮನೆ ಮಾಲೀಕ ನವೀನ್ ತಮ್ಮ ತಾಯಿಯ ಜೊತೆ ಜಮೀನಿನ ಬಳಿ ಹೋಗಿದ್ದರು. ಅವರ ಪತ್ನಿ ತವರಿಗೆ ಹೋಗಿದ್ದರು ಎಂದು ತಿಳಿದು
ಬಂದಿದೆ.

ಕಳ್ಳರು ಮನೆಯ ಬೀರುವಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ಓಲೆ, 3 ಗ್ರಾಂ ಚಿನ್ನದ ಕಾಸು, 3 ಗ್ರಾಂ ಚಿನ್ನದ ಮಾಟಿ, 30 ಗ್ರಾಂ ಬ್ರಾಸ್ಲೆಟ್, 5 ಗ್ರಾಂ ಚಿನ್ನದ ಉಂಗುರ, ತಂದೆಗೆ ಸೇರಿದ 15 ಗ್ರಾಂ ಚಿನ್ನದ ಚೈನು, 7 ಗ್ರಾಂ ಉಂಗುರ, ಬಿರುವಿನಲ್ಲಿದ್ದ 15 ಸಾವಿರ ನಗದು ದೋಚಿದ್ದಾರೆ.

ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.