ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆ ಒಂದೆಡೆ ಕೊಚ್ಚಿ ಹೋಗಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅದನ್ನು ಸರಿಪಡಿಸುವ ಬದಲಿಗೆ ರಸ್ತೆ ಮೇಲೆ ಕಲ್ಲು–ಮಣ್ಣು ಸುರಿದಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಾಮನಗರ– ಚನ್ನಪಟ್ಟಣ ಬೈಪಾಸ್‌ನಲ್ಲಿ ಬಿಳಗುಂಬ ಅಂಡರ್‌ಪಾಸ್ ಬಳಿ (ನೇಟಸ್ ಶಾಲೆ ಸಮೀಪ) ಮಳೆ ನೀರು ನಿಲ್ಲುತ್ತದೆ. ಮಳೆ ನೀರಿನ ರಭಸಕ್ಕೆ ಇಲ್ಲಿನ ಸರ್ವೀಸ್ ರಸ್ತೆಯು ಹತ್ತಾರು ಅಡಿಗಳವರೆಗೆ ಭಾಗಶಃ ಕೊಚ್ಚಿ ಹೋಗಿದೆ.
ಕಿತ್ತು ಹೋದ ಈ ರಸ್ತೆಯ ಫೋಟೊಗಳನ್ನು ಪ್ರಯಾಣಿಕರೊಬ್ಬರು ಭಾನುವಾರ ಫೇಸುಬುಕ್ ಖಾತೆಯಲ್ಲಿ ಜಿಪಿಎಸ್ ಲೊಕೇಶನ್ ಮಾಹಿತಿ ಸಹಿತ ಹಂಚಿಕೊಂಡಿದ್ದರು. ಈ ಫೋಟೊಗಳು ಜಾಲತಾಣದಲ್ಲಿ ಹರಿದಾಡಿ ದ್ದವು. ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಸೋಮವಾರ ಬೆಳ್ಳಂಬೆಳಿಗ್ಗೆ ಹಾಳಾಗಿದ್ದ ರಸ್ತೆಗೆ ಮಣ್ಣು ಸುರಿದು ಮುಚ್ಚಿದ್ದಾರೆ. ಇದಕ್ಕಿಂತ ಸ್ವಲ್ಪ ಮುಂದೆ ರಸ್ತೆ ಇನ್ನಷ್ಟು ಹಾಳಾಗಿದ್ದು, ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳ ಈ ಕ್ರಮಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ರಸ್ತೆ ಹಾಳಾದ ಮಾಹಿತಿ ಸಿಕ್ಕ ನಂತರ ಸೂಕ್ತವಾಗಿ ದುರಸ್ತಿ ಮಾಡುವ ಕಾರ್ಯ ಮಾಡಬೇಕಿತ್ತು. ಆದರೆ ರಸ್ತೆಗೆ ಮಣ್ಣು ಸುರಿದಿದ್ದಾರೆ. ಮತ್ತೊಂದು ಮಳೆ ಸುರಿದರೆ ಅದೂ ಕೊಚ್ಚಿ ಹೋಗುತ್ತದೆ. ಇದರಿಂದ ವಾಹನ ಸವಾರರಿಗೆ ಇನ್ನಷ್ಟು ತೊಂದರೆ ಆಗಲಿದೆ. ಎಲ್ಲೆಲ್ಲಿ ಸರ್ವೀಸ್ ರಸ್ತೆ ಹಾಳಾಗಿದೆ ಎಂಬುದನ್ನು ಗುರುತಿಸಿ ದುರಸ್ತಿ ಮಾಡುವ ಕೆಲಸ
ನಡೆಯಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.