ಬೊಮ್ಮಾಯಿಗೆ ಗಂಡಸುತನ ಇದ್ದರೆ ಕ್ರಮ ಕೈಗೊಳ್ಳಬೇಕು: ಕುಮಾರಸ್ವಾಮಿ ಕಿಡಿ
ರಾಮನಗರ: ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ಕಿಡಿಗೇಡಿಗಳು, ಸಮಾಜ ಘಾತುಕರು. ಅವರಿಗೆ ರೈತರ ಬದುಕು ಗೊತ್ತಿದೆಯೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ನಮ್ಮ ರೈತರು ಕತ್ತರಿಸುವ ಮಾಂಸ ಕ್ಲೀನ್ ಮಾಡಲು, ರೇಷ್ಮೆ- ಮಾವು ಕೊಳ್ಳಲು ಅದೇ ಸಮಾಜದವರು ಬರಬೇಕು. ಇವ್ಯಾವೋ ವಿಶ್ವ ಹಿಂದು ಪರಿಷತ್, ಬಜರಂಗದಳದವರು ಇವರ ಹೊಟ್ಟೆಪಾಡಿಗೆ ದೇಶ ಹಾಳು ಮಾಡೋದಕ್ಕೆ ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟು ದಿನ ಹಲಾಲ್ ಮಾಡಿದ ಮಾಂಸ ತಿಂದಿದ್ದೇವೆ. ಚೆನ್ನಾಗಿಯೇ ಇದ್ದೀವಲ್ಲ. ನಮ್ಮನ್ನು ದೇವರು ಮೆಚ್ಚುವುದಿಲ್ಲವಾ? ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಗಂಡಸುತನ ಇದ್ದರೆ ಕ್ರಮ ಕೈಗೊಳ್ಳಬೇಕು. ಏನೂ ಗೊತ್ತಿಲ್ಲದಂತೆ ಮೌನವಾಗಿ ಇರಬಾರದು ಎಂದು ಆಗ್ರಹಿಸಿದರು.
ಇದನ್ನೂ ಓದಿ| ಆಂಧ್ರದ ಶ್ರೀಶೈಲದಲ್ಲಿ ಸ್ಥಳೀಯರು-ಕನ್ನಡಿಗರ ಘರ್ಷಣೆ: ಬಾಗಲಕೋಟೆ ಯುವಕನ ಕೊಲೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.