ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಖ್ಯಾತಾನಂದ ಸ್ವಾಮೀಜಿ ಪೀಠಾರೋಹಣ ಇಂದು

Last Updated 2 ಫೆಬ್ರುವರಿ 2022, 3:00 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್‌, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಆರ್ಯಈಡಿಗ ಮಹಾಸಂಸ್ಥಾನದ ಸಹಯೋಗದಲ್ಲಿ ಫೆ. 2ರಂದು ಬೆಳಿಗ್ಗೆ 6ಗಂಟೆಗೆ ವಿಖ್ಯಾತಾನಂದ ಸ್ವಾಮೀಜಿ ಅವರ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ, ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಗೋಪೂಜೆ, ವಾಸ್ತುಹೋಮ, ವಾಸ್ತುಬಲಿ, ಸುದರ್ಶನ ಹೋಮ, ದೇವಿಪೂಜೆ, ಅನ್ನಪ್ರಸಾದ, ಗಣಪತಿ ಹೋಮ, ಮಹಾಮೃತ್ಯುಂಜಯ ಯಾಗ, ದೇವಿಗೆ ಸರ್ವಾಲಂಕಾರ ಪೂಜೆ ನಡೆಯಲಿದೆ.

ಶಿವಗಿರಿ ಮಠದ ವಿಶುದ್ಧಾನಂದ ಸ್ವಾಮೀಜಿ ಮಠಕ್ಕೆ ಆಗಮಿಸಿದ್ದಾರೆ.

ಮಂಗಳವಾರ ಭಗವತಿ ಸೇವೆ, ಕಳಸ ಪೂಜೆ, ಪವಮಾನ ಸೂಕ್ತ ಪಠಣ, ಪೀಠಪೂಜೆ, ದುರ್ಗಾಹೋಮ, ದೇವಿಗೆ ಸರ್ವಾಲಂಕಾರ ಮಾಡಿ ಪೂಜಿಸಲಾಯಿತು. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಪದಾಧಿಕಾರಿಗಳಾದ ಜಿ.ಒ. ಕೃಷ್ಣ, ವಾಸನ್‌, ಮುತ್ತುರಾಜ್‌, ಗೋಪಾಲ್‌, ಕುಮಾರ್‌, ಚಿದಾನಂದ್‌, ಮಾಗಡಿ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ್‌, ಕಾರ್ಯದರ್ಶಿ ಚಂದ್ರಶೇಖರ್‌, ಮೋಹನ್‌ ಕುಮಾರ್‌, ಕುದೂರಿನ ವೆಂಕಟೇಶ್‌, ಶಶಾಂಕ್‌ ಈಡಿಗ ಗೌಡ, ಬಾಣವಾಡಿ ಕೃಷ್ಣಪ್ಪ, ಸೋಲೂರಿನ ವೆಂಕಟಾಚಲಯ್ಯ, ಬಸವರಾಜು ಈಡಿಗ, ಸಿದ್ದರಾಜು ಈಡಿಗ ಇದ್ದರು.

ಗೋಪಾಲ್‌ ಜೀಯರ್‌ ಮತ್ತು ತಂಡದವರು ಪೂಜಾಧಿಗಳನ್ನು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT