ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಹಿರಿಯ ನಾಗರಿಕರು, ಅಂಗವಿಕಲರಿಗೆ ಮತದಾನ ಅವಕಾಶ

Published 12 ಏಪ್ರಿಲ್ 2024, 5:43 IST
Last Updated 12 ಏಪ್ರಿಲ್ 2024, 5:43 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಲ್ಲಿ 85 ವರ್ಷಕ್ಕೆ ಮೇಲ್ಪಟ್ಟ ಒಟ್ಟು 2043 ಮತದಾರರಿದ್ದಾರೆ. ಇವರಲ್ಲಿ 246 ಜನರು ಮನೆಯಲ್ಲಿಯೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 2935 ಅಂಗವಿಕಲ ಮತದಾರರಿದ್ದು, ಇವರಲ್ಲಿ 138 ಜನರು ಮನೆಯಲ್ಲಿಯೇ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ.

ಒಟ್ಟು 384 ಜನ ವೃದ್ಧರು ಮತ್ತು ಅಂಗವಿಕಲು ಮನೆಗೆ ಭೇಟಿ ನೀಡುವ ಚುನಾವಣೆ ಸಿಬ್ಬಂದಿಯೊಂದಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಚುನಾವಣಾ ಆದೇಶದಂತೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಚುನಾವಣೆ ಸಹಾಯಕ ಅಧಿಕಾರಿ ಮಹೇಶ್ ಮಾತನಾಡಿ, 85ವರ್ಷಕ್ಕೆ ಮೇಲ್ಪಟ್ಟ ಮತ್ತು ಅಂಗವಿಕಲ ಮತದಾರರಿಗೆ ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲಿಯೇ ಮತದಾನ ಮಾಡಲು ಏ.13 ಮತ್ತು 14 ರಂದು ಅವಕಾಶ ಮಾಡಿಕೊಡಲಾಗಿದೆ. ಏ.16ರ ನಂತರ ಮತದಾನ ಮಾಡುವ ಅವಕಾಶವಿಲ್ಲ. 85ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಚುನಾವಣೆ ಆಯೋಗ ನೀಡಿರುವ ಅವಕಾಶವನ್ನು ಬಳಸಿಕೊಂಡು ಗೌಪ್ಯ ಮತದಾನ ನಡೆಸಲು ಮುಂದಾಗಬೇಕು ಎಂದರು.

ಚುನಾವಣೆ ಶಿರಸ್ತೇದಾರ್ ಹೇಮಾವತಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT