ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್‌ಲಾ: ₹118 ಕೋಟಿ ಆದಾಯ

Last Updated 8 ಫೆಬ್ರುವರಿ 2023, 21:30 IST
ಅಕ್ಷರ ಗಾತ್ರ

ರಾಮನಗರ: ವಂಡರ್‌ಲಾ ಕಂಪನಿ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್‌–ಡಿಸೆಂಬರ್‌) ₹118 ಕೋಟಿ ಆದಾಯ ಗಳಿಸಿದ್ದು, ಕಂಪನಿಯ ಆದಾಯ ಶೇ 62ರಷ್ಟು ವೃದ್ಧಿಯಾಗಿದೆ.

ಈ ಅವಧಿಯಲ್ಲಿ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಒಟ್ಟು 9 ಲಕ್ಷ ಜನರು ಭೇಟಿ ನೀಡಿದ್ದಾರೆ. ಬೆಂಗಳೂರು ಪಾರ್ಕ್‌ಗೆ 3.21 ಲಕ್ಷ , ಕೊಚ್ಚಿ ಪಾರ್ಕ್‌ಗೆ 3.16 ಲಕ್ಷ ಹಾಗೂ ಹೈದರಾಬಾದ್ ಪಾರ್ಕ್‌ಗೆ 2.82 ಲಕ್ಷ ಜನರು ಭೇಟಿ ನೀಡಿದ್ದಾರೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 7.2 ಲಕ್ಷ ಜನರು ವಂಡರ್‌ಲಾಗೆ ಭೇಟಿ ನೀಡಿದ್ದರು. ₹72.7 ಕೋಟಿ ಆದಾಯ ಸಂಗ್ರಹ ಆಗಿತ್ತು. ವಂಡರ್‌ಲಾ ರೆಸಾರ್ಟ್‌ ಆದಾಯವೂ ಶೇ 72ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿಟ್ಟಿಲಪ್ಪಿಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT