ಗುರುವಾರ , ನವೆಂಬರ್ 21, 2019
27 °C

ಕಟ್ಟೆಯ ನೀರಿಗೆ ಜಾರಿಬಿದ್ದು ಯುವಕ ಸಾವು

Published:
Updated:
Prajavani

ಮಾಗಡಿ: ದೇವರ ದರ್ಶನಕ್ಕೆ ಹೋಗಿ, ಕೈಕಾಲು ತೊಳೆಯಲು ನೀರಿಗೆ ಇಳಿದು ಜಾರಿಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಮಾಡಬಾಳ್‌ ಪಂಚಾಯಿತಿ ವ್ಯಾಪ್ತಿಯ ಮಲವರ ಪಾಳ್ಯದ ಬಳಿ ನಡೆದಿದೆ.

ಮೃತರನ್ನು ಚನ್ನಪಟ್ಟಣದ ಕೋಟೆ ನಿವಾಸಿ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಶ್ರೀಕಂಠಯ್ಯ ಅವರ ಪುತ್ರ ಹಿತೇಷ್‌ (17) ಎಂದು ಗುರುತಿಸಲಾಗಿದೆ. ಮೃತರ ಅಣ್ಣ ಮೋನಿಶ್‌, ಇಬ್ಬರು ಗೆಳೆಯರೊಂದಿಗೆ ಮಲವರ ಪಾಳ್ಯದ ಬೀರಪ್ಪ ದೇವರ ದರ್ಶನಕ್ಕೆ ಬಂದಿದ್ದಾಗ ಬಂಡೆ ಕೆಳಗಿನ ಕಟ್ಟೆಯ ನೀರಿಗೆ ಇಳಿದಿದ್ದಾರೆ. ಜಾರಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮೃತರ ಬಂಧುಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)