ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕಣ್ಣೀರು ಒರೆಸದ ಶಾಸಕ

ರಾಮನಗರದಲ್ಲಿ ರಾಜಕೀಯ ಸಮಾಲೋಚನಾ ಸಭೆಯಲ್ಲಿ ಆರೋಪ
Last Updated 11 ಡಿಸೆಂಬರ್ 2017, 10:24 IST
ಅಕ್ಷರ ಗಾತ್ರ

ರಾಮನಗರ: ಕಣ್ಣೀರು ಸುರಿಸಿ ಶಾಸಕರಾದವರು ಸಂಕಷ್ಟದಲ್ಲಿರುವ ಕ್ಷೇತ್ರದ ಜನರ ಕಣ್ಣೀರು ಒರೆಸಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್. ಚಂದ್ರಶೇಖರ್‌ ಆರೋಪಿಸಿದರು.

ಇಲ್ಲಿನ ಆರ್‌.ವಿ.ಸಿ.ಎಸ್. ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ನಿಮ್ಮಲ್ಲೊಬ್ಬ ನಿಮಗಾಗಿ ಎಲ್‌. ಚಂದ್ರಶೇಖರ್‌ ಹಿತೈಷಿಗಳ ರಾಜಕೀಯ ಸಮಾಲೋಚನಾ ಸಭೆಯಲ್ಲಿ ಮಾತ ನಾಡಿದರು.

‘ರಾಮನಗರ ಕ್ಷೇತ್ರದ ಜನರಿಗೆ ನಾಯಕನಿಗಿಂತ ಸೇವಕನ ಅಗತ್ಯವಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರಿಷ್ಠರು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ಕ್ಷೇತ್ರದಲ್ಲಿ ಸಾಮಾನ್ಯ ಸೇವಕನಾಗಿ ಜನರ ಕೆಲಸ ಮಾಡುತ್ತೇನೆ. ಆ ಸ್ಥಾನವನ್ನು ತುಂಬಲು ನನಗೊಂದು ಅವಕಾಶ ನೀಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.

‘ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಲು ನೀತಿ ನಿಬಂಧನೆಗಳಿವೆ. ಪಕ್ಷದಲ್ಲಿ ಅಭ್ಯರ್ಥಿ ಗಳಾಗಲು ಅನೇಕರು ಆಕಾಂಕ್ಷಿಗಳಿದ್ದಾರೆ. ಅವರೆಲ್ಲರು ಅಭ್ಯರ್ಥಿಯಾಗಲು ತಮ್ಮ ಇತಿಮಿತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ನಾನೂ ಅಭ್ಯರ್ಥಿಯಾಗಲು ಇಚ್ಛಿಸಿದ್ದೇನೆ. ಇದಕ್ಕಾಗಿ ಬೆಂಬಲಿಗರು ನನ್ನ ಅತ್ಮಬಲ ಹೆಚ್ಚಿಸಬೇಕು’ ಎಂದು ತಿಳಿಸಿದರು.

‘ವರಿಷ್ಠರು ಯಾರನ್ನು ಅಭ್ಯರ್ಥಿ ಯನ್ನಾಗಿ ಘೋಷಿಸುತ್ತಾರೋ ಅವರ ಪರವಾಗಿ ದುಡಿಯುತ್ತೇವೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಹಾಗಾಗಿ ಪಕ್ಷದ ಗೆಲವಿಗಾಗಿ ಹಗಲಿರಳು ಶ್ರಮಿಸುತ್ತೇವೆ. ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ತಿಳಿಸಿದರು.

ಮುಖಂಡ ಮುಯಿಬ್ ಪಾಷಾ ಮಾತನಾಡಿ, ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೊಬ್ಬರು ಶಾಸಕರಾಗಿ ಆಯ್ಕೆಯಾದಾಗ ಸಂಭವಿಸಿದ ಘಟನೆ ಇನ್ನೂ ಯಾರೂ ಮರೆತಿಲ್ಲ. ಅಂತಹ ಘಟನೆಗಳು ಮರುಕಳಿಸಬಾರದು ಎನ್ನುವುದಾದರೆ ಚಂದ್ರಶೇಖರ್ ಅಭ್ಯರ್ಥಿಯಾಗುವುದು ಸೂಕ್ತ ಎಂದರು.

ನಗರಸಭಾ ಸದಸ್ಯ ಬಿ. ನಾಗೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ, ಮುಖಂಡರಾದ ಶಿವಕುಮಾರಸ್ವಾಮಿ, ಶಿವಲಿಂಗೇಗೌಡ, ಹುಲಿಕೆರೆ ಸಾಹುಕಾರ್, ಶಿವನಂಜಯ್ಯ, ಪುಟ್ಟಣ್ಣ, ಶಿವಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT