ಮಾಗಡಿ: `ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿವೇಶನ ಬಿಟ್ಟುಕೊಟ್ಟಿರುವ ಆರು ಜನರಿಗೆ ಪಟ್ಟಣದಲ್ಲಿ ಉಚಿತ ನಿವೇಶನ ನೀಡಲಾಗುವುದು~ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಶುಕ್ರವಾರ ಪುರಸಭೆಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಆಯುಷ್ ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪುರಸಭೆಯ ಅಭಿವೃದ್ಧಿಗೆ ರೂ.5 ಕೋಟಿ ಮಂಜೂರಾಗಿದೆ ಎಂದರು.

`ಪಟ್ಟಣದಲ್ಲಿ ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ರೂ.4 ಕೋಟಿ ವೆಚ್ಚದಲ್ಲಿ ಕೆ.ಎಂ.ಆರ್.ಪಿ ವತಿಯಿಂದ ಶುದ್ಧ ನೀರಿನ ಘಟಕ ಆರಂಭಿಸಲಾಗುವುದು. ತಿರುಮಲ ರಂಗನಾಥ ಸ್ವಾಮಿ ದೇವಾಲಯದ ಪೌಳಿ ಗೋಡೆಯನ್ನು ರೂ.70 ಲಕ್ಷ ವೆಚ್ಚದಲ್ಲಿ ದುರಸ್ತಿ ಪಡಿಸಲಾಗುವುದು. ಪಟ್ಟಣದಲ್ಲಿ ಹಿಂದಿದ್ದ ಇಬ್ಬರು ಪುರಸಭೆ ಅಧ್ಯಕ್ಷರ ಅವಧಿಯಲ್ಲಿ ಐಡಿಎಸ್ಎಂಟಿ ಯೋಜನೆಯಡಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುವುದು~ ಎಂದರು.

ಪುರಸಭೆಯ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಪಟ್ಟಣದಲ್ಲಿ ಬಡವರಿಗೆ 650 ನಿವೇಶನ ವಿತರಿಸಲಾಗುವುದು. ರೂ.5 ಕೋಟಿ ವೆಚ್ಚದಲ್ಲಿ ಪಟ್ಟಣದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಿಸಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷ ಕೆ. ಮುದ್ದುರಾಜ್ ಯಾದವ್ ಮಾತನಾಡಿದರು.
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ, ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ತಾ.ಪಂ.ಅಧ್ಯಕ್ಷ ಬಿ.ಟಿ.ವೆಂಕಟೇಶ್, ಪುರಸಭೆಯ ಉಪಾಧ್ಯಕ್ಷೆ ಲಕ್ಷ್ಮೀದೇವಿ ರಂಗಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಜಿರಾಬಿ ಇಲಿಯ್ಾ, ಪುರಸಭೆಯ ಸದಸ್ಯರಾದ ರತ್ನಮ್ಮ ರಂಗೇಗೌಡ, ಸುಮಾ ಗಂಗರೇವಣ್ಣ, ಟಿ.ಎಸ್.ಗಂಗಯ್ಯ, ಮುಜಮ್ಮಿಲ್ ಪಾಷಾ, ಜಯಣ್ಣ, ಜಯರಾಮು, ಎನ್.ಗಂಗಯ್ಯ, ರೂಪೇಶ್ ಕುಮಾರ್, ಗಂಗರಾಜು, ಕಮಲಮ್ಮ, ಅಜರಾ ಅಫಸಾನಾ ನವಾಬ್, ರವಿಶಂಕರ್, ಎಂ.ಎಚ್.ರಂಗನಾಥ್, ರಾಘವೇಂದ್ರ, ಜಯಮ್ಮ, ಲೋಕೇಶ್, ಶಶಿಧರ್, ದಯಾನಂದ್, ಎ.ಟಿ.ಶಿವಣ್ಣ, ಚಿಕ್ಕಲಕ್ಷ್ಮಮ್ಮ, ಮಹಮದ್ ರಫೀಕ್, ಮುಖ್ಯಾಧಿಕಾರಿ ರಾಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.