ಗುರುವಾರ , ಫೆಬ್ರವರಿ 20, 2020
22 °C

ರೌಡಿಶೀಟರ್ ಗಿರಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಗೋಪಾಳದ ಸಿದ್ದೇಶ್ವರ ವೃತ್ತದ ಬಳಿ ಗುರುವಾರ ಸಂಜೆ ರೌಡಿಶೀಟರ್ ಗಿರೀಶ್ ಅಲಿಯಾಸ್ ಗಿರಿ (33) ಕೊಲೆಯಾಗಿದೆ.

ನಗರದ ಹೊರವಲಯದ ಅನುಪಿನ ಕಟ್ಟೆ–ಗೋವಿಂದಾಪುರ ನೆಡುತೋಪಿನಲ್ಲಿ ಜೂಜಾಟದ ಆಡುವಾಗ ಗಿರೀಶ್ ಆತನ ಸ್ನೇಹಿತ  ದೊರೆರಾಜ್ ಮತ್ತು ಹಜ್ರು ಆತನ ಸಹೋದರ ಶೋಯೆಬ್, ತಬರೀಜ್ ತಂಡದ ಮಧ್ಯೆ ಜಗಳ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಗಿರಿ ಅಲ್ಲಿಂದ ಹೊರಟಿದ್ದಾನೆ. ಆಗ ಹಜ್ರು ಹಾಗೂ ಇತರ ಐವರು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಸಿದ್ದೇಶ್ವರ ವೃತ್ತದ ಬಳಿ ಬರ್ಜಿಯಿಂದ ಇರಿದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ಕೊಲೆಯಾದ ಗಿರಿ ರೌಡಿಶೀಟರ್ ಹಂದಿ ಅಣ್ಣಿಯ ಕಿರಿಯ ಸಹೋದರ. ರೌಡಿಗಳಾದ ಲವಕುಶ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಬುಧವಾರವಷ್ಟೇ ಕಾರಾಗೃಹದಿಂದ ಬಿಡುಗಡೆಯಾಗಿದ್ದ. ವಿವಿಧ ಠಾಣೆಗಳಲ್ಲಿ ಆತನ ವಿರುದ್ಧ ಮಟ್ಕಾ, ದೊಂಬಿ ಪ್ರಕರಣಗಳು ದಾಖಲಾಗಿದ್ದವು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)