ಜೋಗದಲ್ಲಿ 11 ಮನೆಗಳ ಸರಣಿ ಕಳ್ಳತನ

7

ಜೋಗದಲ್ಲಿ 11 ಮನೆಗಳ ಸರಣಿ ಕಳ್ಳತನ

Published:
Updated:

ಕಾರ್ಗಲ್: ಶರಾವತಿ ಜಲವಿದ್ಯುದಾಗರದಲ್ಲಿ ಕೆಲಸ ನಿರ್ವಹಿಸುವ ನೌಕರರು ವಾಸಿಸುವ ಜೋಗದ ಎಸ್‌ವಿಪಿ ಕಾಲೊನಿಯಲ್ಲಿ ಭಾನುವಾರ ರಾತ್ರಿ ಬೀಗ ಹಾಕಿದ್ದ 11 ಮನೆಗಳಲ್ಲಿ ಸರಣಿ ಕಳ್ಳತನದ ನಡೆದಿದೆ.

ಭಾನುವಾರ ಉದ್ಯೋಗಿಗಳಿಗೆ ರಜೆ ಇರುವ ಕಾರಣ ಹೆಚ್ಚಿನವರು ತಮ್ಮ ಸ್ವಂತ ಊರುಗಳಿಗೆ ಹೋಗಿರುವುದನ್ನು ಗಮನಿಸಿ ಈ ಕಳ್ಳತನದ ಕೃತ್ಯವನ್ನು ಮಾಡಿರ ಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.

ಕೆಪಿಸಿ ಉದ್ಯೋಗಿ ಶೇಷಪ್ಪ ಅವರ ಮನೆಯಿಂದ 75 ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು, ₹ 25 ಸಾವಿರ ನಗದು ಕಳವು ಮಾಡಲಾಗಿದೆ. ಉಳಿದ ಮನೆಯವರು ಬೇರೆ ಬೇರೆಡೆಗೆ ಹೋಗಿರುವುದರಿಂದ ವಿವರಗಳನ್ನು ಸಂಗ್ರಹಿಸಲು ವಿಳಂಬವಾಗುತ್ತದೆ. ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದೆ. ಕಳ್ಳರು ಕಳ್ಳತನ ಬಳಿಕ ಇಲ್ಲಿಯ ಮನೆಯೊಂದರ ಬೈಕ್ ಅನ್ನು ಬಳಸಿಕೊಂಡು ತಾಳಗುಪ್ಪದವರೆಗೆ ಹೋಗಿ, ಬೈಕ್ ಅನ್ನು ತಾಳಗುಪ್ಪದಲ್ಲಿಯೇ ಬಿಟ್ಟು ಹೋಗಿದ್ದಾರೆ. ಜೋಗ ಮತ್ತು ತಾಳಗುಪ್ಪದಲ್ಲಿ ಕಾರ್ಯಾಚರಣೆಯನ್ನು ಚುರುಕು ಗೊಳಿಸಲಾಗಿದೆ ಎಂದು ಜೋಗ ಪೋಲೀಸರು ತಿಳಿಸಿದ್ದಾರೆ.

ಡಿವೈಎಸ್‌ಪಿ ಮಂಜುನಾಥ ಡಿಕವರಿ, ವೃತ್ತ ನಿರೀಕ್ಷಕ ಮಂಜುನಾಥ್, ಸಬ್ ಇನ್‌ಸ್ಪೆಕ್ಟರ್ ಪುಷ್ಪಾ ಮತ್ತು ಎಎಸ್ಐ ನಾಗಪ್ಪ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಪೋಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಮೇಲಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿ ಉದ್ಯೋಗಿಗಳ ಕಾರ್ಮಿಕ ಸಂಘಟನೆ ಆಗ್ರಹಿಸಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !