ಮಂಗಳವಾರ, ಮಾರ್ಚ್ 28, 2023
22 °C

‘ಪುನೀತ್‍ ಅಂತಃಕರಣವಿದ್ದ ನಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪುನೀತ್‍ ರಾಜ್‌ಕುಮಾರ್ ಅಪ್ರತಿಮ ನಟ. ಅದಕ್ಕೂ ಮಿಗಿಲಾಗಿ ಅವರೊಬ್ಬ ಮಾನವೀಯ ಅಂತಃಕರಣವುಳ್ಳ ಪರಿಪೂರ್ಣ ವ್ಯಕ್ತಿಯಾಗಿದ್ದರು ಎಂದು ಪತ್ರಕರ್ತ ಎನ್.ರವಿಕುಮಾರ್ ಟೆಲೆಕ್ಸ್ ಸ್ಮರಿಸಿದರು.

ಇಲ್ಲಿನ ಟ್ಯಾಂಕ್ ಮೊಹಲ್ಲಾದ ಜೈಭುವನೇಶ್ವರಿ ಸದ್ಭಾವನಾ ಕನ್ನಡ
ಯುವಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಕರ್ನಾಟಕ ರಾಜ್ಯೋತ್ಸವ ಹಾಗೂ ಪುನೀತ್‍ ರಾಜ್‌ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿದ್ದ ಪುನೀತ್ ತಮ್ಮೊಳಗಿನ ಮಾನವೀಯ ನಡೆಯಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು. ತಂದೆಯ ಪ್ರತಿರೂಪದಂತೆ ವಿನಯವಂತಿಕೆ, ನಿಷ್ಮಕಲ್ಮಷ ಪ್ರೀತಿ, ವಿಶ್ವಾಸಗಳಿಂದ ಜನಮಾನಸದಲ್ಲಿ ಉಳಿದಿದ್ದರು ಎಂದರು.

ತಮ್ಮ ದುಡಿಮೆಯ ಒಂದು ಪಾಲನ್ನು ಈ ಸಮಾಜದ ನಿರ್ಗತಿಕರಿಗೆ, ಅನಾಥ ಮಕ್ಕಳಿಗೆ ಮೀಸಲಾಗಿಟ್ಟದ್ದ ಪುನೀತ್ ಅವರು ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ನಿರ್ಮಲವಾಗಿ ಸೇವೆಗೈಯುತ್ತಿದ್ದರು. ಇದು ಅವರಲ್ಲಿನ ಮಾನವೀಯತೆಗೆ ಸಾಕ್ಷಿ. ಅವರ ಅಕಾಲಿಕ ನಿಧನದಿಂದ ಸಮಾಜ ಪರಿಪೂರ್ಣ ಜೀವವೊಂದನ್ನು ಕಳೆದುಕೊಂಡು ಬಡವಾದಂತಾಗಿದೆ ಎಂದು ಹೇಳಿದರು.

‘ಪುನೀತ್ ನಿಧನದಿಂದ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುವಂತಾಗಿದೆ. ಅವರ ಬದುಕಿನ ಆದರ್ಶಗಳನ್ನು ನಾವು ಅಳವಡಿಸಿಕೊಂಡಾಗ ಅವರ ಆತ್ಮಕ್ಕೆ ನಿಜ ಗೌರವ ಸಲ್ಲಿಸದಂತಾಗುತ್ತದೆ’ ಎಂದು ಪ್ರಾರ್ಥಿಸಿದರು.

ಸಂಘದ ಅಧ್ಯಕ್ಷರಾದ ಸುರೇಶ್, ಮುಖಂಡರಾದ ಸೀತಾರಾಂ, ಲಕ್ಷ್ಮಣ,
ಮಂಜುನಾಥ್, ಪ್ರೇಮ್, ಮೇಘರಾಜ್, ಭೋಜರಾಜ, ಸಿ.ಬಿ ಚಂದ್ರಶೇಖರ್, ಅವಿನಾಶ್, ಆದರ್ಶ, ರಾಮಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.