ಡ್ರಗ್ಸ್ ವಿರುದ್ಧ ಜಾಗೃತಿ; 15 ಕಿ.ಮೀ ಓಟ

ಶಿವಮೊಗ್ಗ: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಜಾಗೃತಿ ಕುರಿತು ಬೆಂಗಳೂರು ಹೈಕೋರ್ಟ್ ವಕೀಲ ಡಾ.ಮೋಹನ್ ಕುಮಾರ್ ದಾನಪ್ಪನವರು ಶಿವಮೊಗ್ಗ ನಗರದಲ್ಲಿ 15 ಕಿ.ಮೀ ಮ್ಯಾರಥಾನ್ ಓಟದ ಮೂಲಕ ಜಾಗೃತಿ ಮೂಡಿಸಿದರು.
ವಿನೋಬ ನಗರದಿಂದ ಕಾಶೀಪುರದವರೆಗೂ ಮ್ಯಾರಥಾನ್ ನಡೆಸಿದರು. ‘ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವ್ಯಾಪಕವಾಗಿರುವ ಡ್ರಗ್ಸ್ ದೇಹಕ್ಕೆ, ಆರೋಗ್ಯಕ್ಕೆ ಮಾರಕ. ದೇಶವನ್ನೇ ಡ್ರಗ್ಸ್‌ನಿಂದ ನಿರ್ಮೂಲನೆ ಮಾಡಬೇಕು’ ಎಂದು ಮೋಹನ್ ಕುಮಾರ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.