ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಇಳಿಯಲಿದೆ ಬೆಂಗಳೂರು–ವಿಜಯವಾಡ ವಿಮಾನ

Published 6 ಸೆಪ್ಟೆಂಬರ್ 2023, 16:38 IST
Last Updated 6 ಸೆಪ್ಟೆಂಬರ್ 2023, 16:38 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಂಗಳೂರಿನಿಂದ ವಿಜಯವಾಡಕ್ಕೆ ತೆರಳುವ ಇಂಡಿಗೋ ವಿಮಾನ ಇನ್ನು ಮುಂದೆ ಶಿವಮೊಗ್ಗದಲ್ಲಿ ಇಳಿದು ಪ್ರಯಾಣಿಕರನ್ನು ಕರೆದೊಯ್ಯಲಿದೆ. ಎರಡು ಮೂರು ದಿನಗಳಲ್ಲಿ ಆ ವಿಮಾನ ಇಲ್ಲಿ ಇಳಿಯಲಿದೆ. ಇನ್ನೊಂದು ತಿಂಗಳಲ್ಲಿ ಮತ್ತಷ್ಟು ಸ್ಥಳಗಳಿಗೆ ಸಂಪರ್ಕ (ಕನೆಕ್ಟಿಂಗ್ ಫ್ಲೈಟ್) ವಿಮಾನಗಳು ಓಡಾಟ ನಡೆಸಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಈಗಾಗಲೇ ಇಂಡಿಗೋ ವೆಬ್‌ಸೈಟ್‌ನಲ್ಲಿ ಶಿವಮೊಗ್ಗ–ವಿಜಯವಾಡ ಮಾರ್ಗವನ್ನು ಪ್ರಕಟಿಸಲಾಗಿದೆ. ಶೀಘ್ರ ಬುಕ್ಕಿಂಗ್ ಕೂಡ ಶುರುವಾಗಲಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT