ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ: ರೌಡಿ ಶೀಟರ್ ಮುಜ್ಜು ಹತ್ಯೆ

Published 21 ಜುಲೈ 2023, 15:50 IST
Last Updated 21 ಜುಲೈ 2023, 15:50 IST
ಅಕ್ಷರ ಗಾತ್ರ

ಭದ್ರಾವತಿ : ಇಲ್ಲಿನ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ರೌಡಿಶೀಟರ್‌ವೊಬ್ಬನನ್ನು ಆತನ ಮನೆಯ ಎದುರೇ ಹತ್ಯೆ ಮಾಡಲಾಗಿದೆ.

ಮುಜಾಹಿದ್ದಿನ್ ಅಲಿಯಾಸ್ ಮುಜ್ಜು (35) ಕೊಲೆಯಾದ ರೌಡಿ. ಈತ ಬೊಮ್ಮನಕಟ್ಟೆ ಬಡಾವಣೆಯಲ್ಲಿರುವ ತನ್ನ ಎರಡನೇ ಪತ್ನಿ ಮನೆಯಲ್ಲಿ ಇದ್ದ. ತಡರಾತ್ರಿ ಮನೆಯ ಹತ್ತಿರ ಬಂದಿದ್ದ ದುಷ್ಕರ್ಮಿಗಳು ‘ನಿನ್ನ ಜೊತೆ ಮಾತನಾಡುವುದಿದೆ. ಹೊರಗೆ ಬಾ’ ಎಂದು ಕರೆದಿದ್ದಾರೆ. ಆತ ಗೇಟ್‌ ಬಳಿ ಹೋಗುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮುಜ್ಜು ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪೇಪರ್ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ಕೊಲೆ ಮಾಡಿದವರು ಯಾರು, ಕೊಲೆಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಸಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT