ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣಕ್ಕೆ ಕ್ಷೇತ್ರಕ್ಕೆ ಹೆಚ್ಚಿನ ಸಾಲದ ನೆರವು: ಸಂಸದ ಬಿ.ವೈ ರಾಘವೇಂದ್ರ

ಬ್ಯಾಂಕ್‌ ಅಧಿಕಾರಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಸಲಹೆ
Last Updated 28 ಅಕ್ಟೋಬರ್ 2021, 14:42 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿ ಸಾಲ, ಗೃಹ ಸಾಲ, ವಾಹನ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ಹೆಚ್ಚಿನ ಗಮನಹರಿಸಿವೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸಾಲ ದೊರಕಿಸಲು ಚಿತ್ತಹರಿಸಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಸಲಹೆ ನೀಡಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್‌ಗಳು ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಸಾಲ ಸಂಪರ್ಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿವಿಧ ಸಾಲಗಳನ್ನುನೀಡುವಲ್ಲಿ ಬ್ಯಾಂಕ್ ಗಳು ಶೇಕಡವಾರು ಪ್ರಗತಿ ಸಾಧಿಸಿದೆ. ಶಿಕ್ಷಣ ಸಾಲದಲ್ಲಿ ಶೇ 55ರ ಗುರಿ ಮುಟ್ಟಿದೆ. ಎಲ್ಲಾ ಬ್ಯಾಂಕ್‌ಗಳು ಶಿಕ್ಷಣ ಕೇತ್ರಕ್ಕೂ ಹೆಚ್ಚಿನ ಸಾಲ ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದರು.

ಎಳನೀರು ಮಾರುವವನು ಕೂಡ ಈಗ ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇ–ಕಾಮರ್ಸ್ ಮಾರ್ಕೆಟಿಂಗ್‌ನಲ್ಲಿ ದೇಶದ ಶೇ 30 ಜನ ಖರೀದಿ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳು ಆನ್‌ಲೈನ್ ವ್ಯಾಪ್ತಿಗೆ ಸೇರಿ ಡಿಜಿಟಲೀಕರಣಗೊಂಡಿದೆ. ಕೃಷಿ ಕೇತ್ರಕ್ಕೆ ಶೇ 96ರಷ್ಟು ಸಾಲದ ಗುರಿ ಸಾಧಿಸಲಾಗಿದೆ. ಕೃಷಿ ಮೂಲಸೌಕರ್ಯ ನಿಧಿ, ಪಿಎಂ ಸ್ವನಿಧಿ, ಸ್ಟಾಂಡ್‌ ಆಫ್ ಇಂಡಿಯ ಮುಂತಾದ ಯೋಜನೆಗಳಿಗೆ ಸ್ಥಳದಲ್ಲೆ ಸಾಲನೀಡಲು ನಿರ್ದೇಶಿಸಲಾಗಿದೆ ಮಾಹಿತಿ ನೀಡಿದರು.

ಕೇಂದ್ರ, ರಾಜ್ಯ ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಕೇಂದ್ರದ ಆರ್ಥಿಕ ಸೇವಾ ಇಲಾಖೆ ಮತ್ತು ಆರ್ಥಿಕ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕೊರೊನಾ ಸಮಯದಲ್ಲಿ ಅನೇಕ ಒತ್ತಡಗಳ ನಡುವೆಯು ಬ್ಯಾಂಕ್ ಸಿಬ್ಬಂದಿ ಶಕ್ತಿಮೀರಿ ಕೊರೊನಾ ವಾರಿಯರ್‌ಗಳಂತೆ ಶ್ರಮ ಪಟ್ಟಿದ್ದಾರೆ. ಕೊರೊನಾದಿಂದ ವಿಶ್ವದ ಹಲವು ದೇಶಗಳು ಆರ್ಥಿಕ ಸಂಕಷ್ಟದಲ್ಲಿ ಇವೆ. ಇಂತಹ ಸಮಯದಲ್ಲೂ ಭಾರತ 9.1 ಜಿಡಿಪಿ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದೆ. ಪ್ರಧಾನಿ ಮೋದಿ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿನ ಸೌಲಭ್ಯ ಸಿಗಬೇಕು ಎಂಬ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಈ ಸಮಯದಲ್ಲಿ ವಿವಿಧ ಯೋಜನೆಗಳ ಪಲಾನುಭವಿಗಳಿಗೆ ಸಾಲ ಮಂಜುರಾತಿ ಪತ್ರ ವಿತರಿಸಲಾಯಿತು .

ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರಾಮನಾಯ್ಕ, ಕರ್ನಾಟಕ ಬ್ಯಾಂಕ್ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಉಡುಪ, ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಸಿದ್ದೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT