ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಗುತ್ತಿ ದೇವಸ್ಥಾನಕ್ಕೆ ಹಾನಿ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published 4 ಆಗಸ್ಟ್ 2023, 14:17 IST
Last Updated 4 ಆಗಸ್ಟ್ 2023, 14:17 IST
ಅಕ್ಷರ ಗಾತ್ರ

ಶಿಕಾರಿಪುರ: ‘ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಿ ದೇವಸ್ಥಾನಕ್ಕೆ ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರೇಣುಕಾಂಬ ದೇವಿ ಭಕ್ತರು ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು.

‘ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನವು ಪುರಾಣ ಪ್ರಸಿದ್ಧವಾಗಿದ್ದು, ನಾಡಿನಾದ್ಯಂತ ಭಕ್ತ ಸಮೂಹ ಹೊಂದಿದೆ. ದೇವಸ್ಥಾನವು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುತ್ತದೆ. ಆದರೆ, ಆಗಸ್ಟ್‌ 2ರಂದು ರಾತ್ರಿ ಕೆಲವು ಕಿಡಿಗೇಡಿಗಳು ದೇವಸ್ಥಾನದ ಗರ್ಭಗುಡಿಗೆ ಅಕ್ರಮವಾಗಿ ಪ್ರವೇಶಿಸಿ ದೇವಿಯ ಮೂರ್ತಿಯನ್ನು ಕಿತ್ತೆಸೆದು ಪೂಜಾ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಭಕ್ತರಲ್ಲಿ ನೋವು ತಂದಿದೆ. ದೇವಸ್ಥಾನ ಹಾನಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು’ ಎಂದು ಭಕ್ತರಾದ ಬಿ.ಸಿ. ವೇಣುಗೋಪಾಲ್ ಒತ್ತಾಯಿಸಿದರು.

ಭಕ್ತರಾದ ಚೌಟಗಿ ಪರಶುರಾಮ್, ಚೌಟಗಿ ಮೋಹನ್, ಬಡಗಿ ಫಾಲಾಕ್ಷಪ್ಪ, ಚೌಟಗಿ ಸುರೇಶ್, ಅಡಿಕೆ ಮಲ್ಲಪ್ಪ, ತ್ಯಾಗರ್ತಿ ರವಿ, ಹೂಗಾರ್ ಗಿಡ್ಡಪ್ಪ, ಮಂಜುನಾಥ್, ಗುಡದಯ್ಯ, ಅವಿನಾಶ್, ಗೋಣಿ ಮಾಲು, ತಮ್ಮಣ್ಣ, ಗುಂಡ, ಕರುವಿನ ಮಧು, ಭಂಡಾರಿ ಗಿರೀಶ್, ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT