ಶನಿವಾರ, ಜುಲೈ 24, 2021
26 °C
ಶಿಕಾರಿಪುರ ತಾಲ್ಲೂಕು ಖಾವಾಸಪುರದ 58 ವರ್ಷದ ಪುರುಷ ಸಾವು, ಒಟ್ಟು ಸೋಂಕಿತರು 372

ಶಿವಮೊಗ್ಗದಲ್ಲಿ ಒಂದೇ ದಿನ 37 ಜನರಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಒಂದೇ ದಿನ ಅತಿ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಗುರುವಾರ ಪಿ–29105ರಿಂದ ಪಿ–29141ರವರೆಗಿನ 37 ಜನರು ಸೋಂಕಿಗೆ ಒಳಗಾಗಿರುವುದು ಆತಂಕ ಹೆಚ್ಚಿಸಿದೆ.

ಒಟ್ಟು ಸೋಂಕಿತರ ಸಂಖ್ಯೆ 372ಕ್ಕೇರಿದೆ. ಇದುವರೆಗೂ 141 ಜನರು ಗುಣಮುಖರಾಗಿದ್ದಾರೆ. 227 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ನಗರ 17 ಜನರಿಗೆ ಸೋಂಕು ಹರಡಿದೆ.

12 ಜನರಿಗೆ ಪಥಮ ಸಂಪರ್ಕದ ಸೋಂಕು:

ಒಂದು ಹಾಗೂ ಎರಡು ವರ್ಷದ ಬಾಲಕರು ಸೇರಿ ಒಟ್ಟು 12 ಜನರಿಗೆ ಕೋವಿಡ್‌ ರೋಗಿಗಳ ಪ್ರಥಮ ಸಂಪರ್ಕದಿಂದ ವೈರಸ್‌ ತಗುಲಿದೆ. 

ಪಿ–14381 ರೋಗಿಯ ಸಂಪರ್ಕದಿಂದ 43 ವರ್ಷದ ಮಹಿಳೆ, 18 ವರ್ಷದ ಯುವತಿ, ಪಿ–10396 ರೋಗಿಯ ಸಂಪರ್ಕದಿಂದ 41 ವರ್ಷದ ಮಹಿಳೆ, ಪಿ–336 ರೋಗಿಯ ಸಂಪರ್ಕ 26 ವರ್ಷದ ಮಹಿಳೆ, ಪಿ– 23614 ರೋಗಿಯ ಸಂಪರ್ಕದಿಂದ 39 ವರ್ಷದ ಪುರುಷ, ಪಿ–18070 ರೋಗಿಯ ಸಂಪರ್ಕದಿಂದ 2 ವರ್ಷದ ಬಾಲಕ, 30 ವರ್ಷದ ಮಹಿಳೆ, ಪಿ–21631 ರೋಗಿಯ ಸಂಪರ್ಕದಿಂದ 22 ವರ್ಷದ ಯುವತಿ, ಪಿ–18073 ರೋಗಿಯ ಸಂಪರ್ಕದಿಂದ 1 ವರ್ಷದ ಬಾಲಕ, ಪಿ–25578 ರೋಗಿಯ ಸಂಪರ್ಕದಿಂದ 30 ವರ್ಷ ಹಾಗೂ 29 ವರ್ಷದ ಪುರುಷರು, ಪಿ–25578 ರೋಗಿಯ ಸಂಪರ್ಕದಿಂದ 24 ವರ್ಷದ ಯುವಕನಿಗೆ ಸೋಂಕು ತಗುಲಿದೆ.

9 ಜನರಿಗೆ ತೀವ್ರ ಉಸಿರಾಟದ ತೊಂದರೆ: ತೀವರ ಉಸಿರಾಟದ ತೊಂದರೆಗೆ ಒಳಗಾಗಿದ್ದ ಜಿಲ್ಲೆಯ 9 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

51 ವರ್ಷ, 33, 46, 39, 28, 57, ಹಾಗೂ 62 ವರ್ಷದ ಪುರುಷರು, 58 ವರ್ಷದ ಮಹಿಳೆ, 75 ವರ್ಷದ ವೃದ್ಧೆ ಉಸುರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಬೆಂಗಳೂರಿನಿಂದ ಹಿಂದಿರುಗಿದ 8 ಜನರಿಗೆ ವೈರಸ್‌: ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ 8 ಜನರಿಗೆ ಸೋಂಕು ದೃಢಪಟ್ಟಿದೆ. 30, 36, 40 ವರ್ಷದ ಪುರುಷರು, 15, 16 ವರ್ಷದ ಬಾಲಕರು, 36, 37 ವರ್ಷದ ಮಹಿಳೆಯರು, 22 ವರ್ಷ ಯುವತಿಗೆ ಸೋಂಕು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶದಿಂದ ಬಂದಿದ್ದ 38 ವರ್ಷದ ಪುರುಷನಲ್ಲೂ ಕೊರೊನಾ ಖಚಿತಪಪಟ್ಟಿದೆ. 7 ಜನರಿಗೆ ತಗುಲಿದ ವೈರಸ್‌ ಮೂಲವೇ ಪತ್ತೆಯಾಗಿಲ್ಲ.

ಸೀಲ್‌ಡೌನ್‌: ನಿರ್ಮಲಾ ಆಸ್ಪತ್ರೆ,  ನಗರದ ಕೋಟೆ ರಸ್ತೆ, ಗಾಂಧಿ ಬಜಾರ್ ತುಳುಜಾ ಭವಾನಿ ರಸ್ತೆ, ಹಳೇ ಅಂಚೆಕಚೇರಿ ರಸ್ತೆ ಸೀಲ್‌ ಡೌನ್‌ ಮಾಡಲಾಗಿದೆ. 

 

ತಾಲ್ಲೂಕಿನ ಹಿಲ್ಕುಂಜಿಯ ದಂಪತಿಗೆ ಕೊರೊನಾ ದೃಡಪಟ್ಟಿದೆ. ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
ಗರತಿಕೆರೆಯಲ್ಲಿ ಒಬ್ಬ ವ್ಯಕ್ತಿ  ಕೊರಾನ ದೃಡಪಟ್ಟಿದೆ. ಗವಟೂರಿನ ವ್ಯಕ್ತಿ ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ ನಾಯ್ಕ ತಿಳಿಸಿದರು.

ಸೊರಬ: ಮತ್ತೆ ನಾಕ್ವರಿಗೆ ಸೋಂಕು

ಪಟ್ಟಣದ ಕಾನಕೇರಿ ಬಡಾವಣೆಯ ಒಂದೇ ಮನೆಯಲ್ಲಿ ಇಬ್ಬರಿಗೆ, ಚಂದ್ರಗುತ್ತಿ ಮೆಸ್ಕಾಂ ವಿಭಾಗೀಯ ನೌಕರನಿಗೆ ಹಾಗೂ ಜ್ವರದಿಂದ ಬಳಲುತ್ತಿರುವ ತಾಲ್ಲೂಕಿನ ಚಿಕ್ಕಕಬ್ಬೂರು ಗ್ರಾಮದ ಪುರುಷನಿಗೆ ಕೊರಾನಾ ಇರುವುದು ಖಚಿತವಾಗಿದೆ. ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಕುಂಸಿ: ವೃದ್ಧೆಗೆ ಕೊರೊನಾ ದೃಢ:

ಇಲ್ಲಿನ ಬೊಮ್ಮನಕಟ್ಟೆ ಕೇರಿಯ 75 ವರ್ಷದ ವೃದ್ಧೆಗೆ ಕೊರೊನಾ ಇರುವುದು ದೃಢಪಟ್ಟಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆ 15 ದಿನದ ಹಿಂದೆ ಬೆಂಗಳೂರಿನಿಂದ ಗಾಜನೂರಿಗೆ ಬಂದಿದ್ದರು. ವೃದ್ಧೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ ನಂತರ ಕುಂಸಿಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದರು. ವರದಿ ಬಂದ ನಂತರ ಮತ್ತೆ ಮೆಗ್ಗಾನ್ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ ಬೀದಿಯವರು ಸ್ವಯಂ ಪ್ರೇರಿತವಾಗಿ ಸೀಲ್‌ಡೌನ್ ಮಾಡಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.