ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್: ₹ 19 ಕೋಟಿ ಲಾಭ ಗಳಿಕೆ

ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಮಾಹಿತಿ
Last Updated 18 ಸೆಪ್ಟೆಂಬರ್ 2020, 13:55 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸಕ್ತ ವರ್ಷಶಿವಮೊಗ್ಗ ಡಿಸಿಸಿ ಬ್ಯಾಂಕ್ ₹ 19ಕೋಟಿ ಲಾಭ ಗಳಿಸಿದೆ. ರಾಜ್ಯದಡಿಸಿಸಿ ಬ್ಯಾಂಕ್‌ಗಳಲ್ಲೇಅಗ್ರಸ್ಥಾನದಲ್ಲಿದೆಎಂದು ಬ್ಯಾಂಕ್‌ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಹೇಳಿದರು.

ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಅವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮುಖ ಮಂಟಪ, ಮೇಲ್ಚಾವಣಿ ಹಾಗೂಅತಿಥಿ ಗೃಹ ಲೋಕಾರ್ಪಣೆ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.

ಲಾಭ ಗಳಿಕೆಯಲ್ಲಿ ಡಿಸಿಸಿ ಬ್ಯಾಂಕ್‌ ಸತತವಾಗಿ ಅಗ್ರಸ್ಥಾನ ಉಳಿಸಿಕೊಂಡು ಬಂದಿದೆ. ಆರ್‌ಬಿಐ ನಿಯಮಗಳ ಮಧ್ಯೆಯೂ ರೈತರ ಹಿತ ಕಾಯ್ದುಕೊಂಡು ಬಂದಿದೆ.165 ಪ್ರಾಥಮಿಕ ಸಹಕಾರ ಸಂಘಗಳ ಮೂಲಕ1.10 ಲಕ್ಷ ರೈತರಿಗೆ ಸುಮಾರು ₹900 ಕೋಟಿ ಸಾಲ ನೀಡಿದ್ದೆವೆ. ಅದರಲ್ಲಿ ₹ 700ಕೋಟಿ ಬಡ್ಡಿರಹಿತವಾಗಿ ರೈತರಿಗೆ ನೀಡಲಾಗಿದೆ ಎಂದರು.

ಕೊರೊನಾ, ನೆರೆ ಹಾವಳಿಗೆ ಸಿಲುಕಿಸಂಕಷ್ಟದಲ್ಲಿರುವ ರೈತರಿಗೆ ಡಿಸಿಸಿ ಬ್ಯಾಂಕ್ ಸಾಕಷ್ಟು ನೆರವು ನೀಡಿದೆ. ಹೊಸ ರೈತರಿಗೆ ಸಾಲ ನೀಡಿದೆ. ಉಪ ಕಸುಬುನೆಚ್ಚಿಕೊಂಡಿರುವ ರೈತರಿಗೂಕೃಷಿಯೇತರ ಸಾಲ ನೀಡಿದೆ. 25ವರ್ಷಗಳ ಅವಧಿಯಲ್ಲಿ ಡಿಸಿಸಿ ಬ್ಯಾಂಕ್‌ ಮಾದರಿ ಸಹಕಾರ ಸಂಸ್ಥೆಯಾಗಿ ಬೆಳೆದುಬಂದಿದೆ ಎಂದು ಸ್ಮರಿಸಿದರು.

ಬ್ಯಾಂಕ್‌ ನಾಲ್ಕು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.28 ಶಾಖೆಗಳಿವೆ900 ಸಹಕಾರಿ ಸಂಸ್ಥೆಗಳಿವೆ. ಸರ್ಕಾರದ ಎಲ್ಲ ಯೋಜನೆಗಳನ್ನೂ ಪ್ರಾಮಾಣಿಕವಾಗಿ ತಲುಪಿಸಲಾಗಿದೆ. ಗ್ರಾಹಕರು, ರೈತರಿಗಾಗಿಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಲವು ಪ್ರಥಮಗಳ ಇತಿಹಾಸಕ್ಕೆ ನಾಂದಿ ಹಾಡಿದೆ ಎಂದು ವಿವರ ನೀಡಿದರು.

ಮಹಿಳೆಯರ ಸ್ವಾವಲಂಬನೆಗೂಬ್ಯಾಂಕ್ಆದ್ಯತೆ ನೀಡಿದೆ. ಅರ್ಥಿಕ ನೆರವುಕಲ್ಪಿಸಿದೆ. ಬ್ಯಾಂಕ್ ಅವರಣದಲ್ಲಿ ನೂತನವಾಗಿ ಮುಖ ಮಂಟಪ, ಮೇಲ್ಚಾವಣಿ, ಅತಿಥಿ ಗೃಹನಿರ್ಮಿಸಲಾಗಿದೆ. ಬಸವ ಕೇಂದ್ರದ ಶ್ರೀಗಳು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.

ನೂತನ ನಿರ್ಮಾಣಗಳನ್ನು ಲೋಕಾರ್ಪಣೆ ಮಾಡಿದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಸಂಪತ್ತು ಅನರ್ಥವಾಗಿ ಒಟ್ಟುಗೂಡಬಾರದು.ಸಮಾಜದಲ್ಲಿ ಹಂಚಿಕೆಯಾಗಬೇಕು. ಆಗ ಉಪಯೋಗಕ್ಕೆ ಬರುತ್ತದೆ. ಹಣ ಇದ್ದವರು ಬ್ಯಾಂಕಿನಲ್ಲಿ ಠೇವಣಿಇರಿಸಿದರೆ ಇತರೆ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ನಂಬಿಕೆ ಉಳಿಸಿಕೊಂಡು ರೈತರ ಶ್ರೇಯಸ್ಸಿಗೆ ದುಡಿಯುತ್ತಿದೆ.ದೇಶಕ್ಕೆ ಮಾದರಿ ಸಹಕಾರ ಸಂಸ್ಥೆಯಾಗಿದೆ.ಬ್ಯಾಂಕ್‌ಪ್ರಯೋಜನ ಎಲ್ಲ ರೈತರು,ಕಾರ್ಮಿಕರು, ಮಹಿಳೆಯರಿಗೆ ದೊರಕುವಂತಾಗಬೇಕುಎಂದರು.

ಬ್ಯಾಂಕ್‌ಉಪಾಧ್ಯಕ್ಷ ಚನ್ನವೀರಪ್ಪ,ನಿರ್ದೇಶಕರಾದಕೆ.ಪಿ.ದುಗ್ಗಪ್ಪಗೌಡ, ಶ್ರೀಪಾದ್ ಹೆಗಡೆ, ಅಗಡಿ ಅಶೋಕ್, ಬಸವಾನಿ ವಿಜಯದೇವ್, ಜೆ.ಪಿ.ಯೋಗೀಶ್, ಎಸ್.ಪಿ.ದಿನೇಶ್,ಎಚ್.ಎಲ್.ಷಡಾಕ್ಷರಿ, ಬಿ.ಡಿ.ಭೂಕಾಂತಪ್ಪ, ಜೆ.ಎನ್.ಸುಧೀರ್, ಆನಂದ್, ಎಚ್.ಕೆ.ವೆಂಕಟೇಶ್‌, ಬ್ಯಾಂಕ್ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT