ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಕೆ ಮಾಂಸ ಸಿದ್ಧಪಡಿಸುತ್ತಿದ್ದ ಆರೋಪಿಗಳ ಬಂಧನ

Published 26 ಜುಲೈ 2023, 16:22 IST
Last Updated 26 ಜುಲೈ 2023, 16:22 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕುಳ್ಳುಂಡೆ ಗ್ರಾಮದಲ್ಲಿ ಶಿಕಾರಿ ಮೂಲಕ ಜಿಂಕೆ ಮಾಂಸ ಸಿದ್ದಪಡಿಸುತ್ತಿದ್ದ ಸ್ಥಳದ ಮೇಲೆ ಮಂಗಳವಾರ ರಾತ್ರಿ ಮಂಡಗದ್ದೆ ವಲಯಾರಣ್ಯಾಧಿಕಾರಿ ಆದರ್ಶ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕುಳ್ಳುಂಡೆ ಗ್ರಾಮದ ಸ.ನಂ. 73ರ ಖಾತೆ ಜಾಗದಲ್ಲಿ ಜಿಂಕೆಯನ್ನು ಮಾಂಸವಾಗಿ ಪರಿವರ್ತಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಕುಳ್ಳುಂಡೆ ಗ್ರಾಮದ ರಜತ್‌ (23), ವಿನಯ್‌ (19) ಬಂದಿತ ಆರೋಪಿಗಳು. ಮನೋಜ್‌ (28), ಚಂದ್ರು (25), ಮಣಿಕಂಠ (26) ಎಂಬುವವರು ಪರಾರಿಯಾಗಿದ್ದಾರೆ. ಆರೋಪಿಗಳಿಂದ ಚಿಂಕೆ ಮಾಂಸ, ಕತ್ತಿ, ಕೊಡಲಿ, ಕೋವಿ, ಚಾಕು, 2 ಬೈಕ್‌ ವಶಪಡಿಸಿಕೊಂಡಿದ್ದಾರೆ.

ಡಿಎಫ್‌ಓ ಶಿವಶಂಕರ್‌, ಎಸಿಎಫ್‌ ಎಚ್.ಪ್ರಕಾಶ್‌ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ಬಿ.ಆರ್.‌ ಸುಹಾಸ್‌, ಗಸ್ತು ಅರಣ್ಯ ಪಾಲಕರಾದ ಡಿ. ದುರ್ಗಪ್ಪ, ಎ.ವಿ. ಸಂತೋಷ್‌ ಕುಮಾರ್‌ ಸೇರಿದಂತೆ ಅನೇಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT