ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನವಟ್ಟಿ | ಗಾಂಜಾ ಮಾರಾಟ: ಇಬ್ಬರು ಯುವಕರ ಬಂಧನ

Published 27 ಜೂನ್ 2024, 15:59 IST
Last Updated 27 ಜೂನ್ 2024, 15:59 IST
ಅಕ್ಷರ ಗಾತ್ರ

ಆನವಟ್ಟಿ: ಸಮೀಪದ ತಿಮ್ಮಾಪುರ ಗುಡ್ಡದ ಕ್ರಾಸ್‌ನಿಂದ ಬೆಂಡಿಕಟ್ಟೆಗೆ ಹೋಗುವ ದಾರಿಯಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಇಬ್ಬರು ಯುವಕರನ್ನು ಪಿಎಸ್‍ಐ ರಾಜುರೆಡ್ಡಿ ನೇತೃತ್ವದ ತಂಡ ಮಾಲು ಸಮೇತ ಬಂಧಿಸಿಸಿದೆ.

ಹಾವೇರಿ ಜಿಲ್ಲೆಯ ಗುಡ್ಡದ ಮಲ್ಲಾಪುರದ ಶೋಹಿಲ್ ಮುಲ್ಲಾನ್ನಾವರ್ (27), ತಿಳುವಳ್ಳಿಯ ಗೌಸ್ ಮೋಹಿದ್ದೀನ್ (26) ಬಂಧಿತ ಆರೋಪಿಗಳು. ಅವರ ಬಳಿ ಇದ್ದ ₹ 40,000 ಮೌಲ್ಯದ 980 ಗ್ರಾಂನಷ್ಟು ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ದಂಧೆಯು ಬಹಳ ದಿನಗಳಿಂದ ನಡೆಯುತ್ತಿರುವ ಬಗ್ಗೆ  ಮಾಹಿತಿ ಇತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಶೇಖರ್ ಹಾಗೂ ಸಿಪಿಐ ರಮೇಶ ರಾವ್ ಅವರ ಮಾರ್ಗದರ್ಶನದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಯುವಕರನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್‍ಐ ರಾಜು ರೆಡ್ಡಿ ತಿಳಿಸಿದರು.

ಕಾರ್ಯಚರಣೆಯಲ್ಲಿ ಪೊಲೀಸ್‍ ಸಿಬ್ಬಂದಿ ಮಂಜುನಾಥ, ಜಗದೀಶ್, ಹರಿಪ್ರಸಾದ್, ಹನುಮಂತ, ನಿಂಗಪ್ಪ ಪ್ರಕಾಶ್, ಗಿರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT