ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ನಾರಾಯಣಪುರ ಸ್ವಯಂ ಲಾಕ್‌ಡೌನ್

Last Updated 18 ಮೇ 2021, 3:08 IST
ಅಕ್ಷರ ಗಾತ್ರ

ನಾರಾಯಣಪುರ (ಶಿವಮೊಗ್ಗ): ಹಾರನಹಳ್ಳಿ ಹೋಬಳಿಯ ನಾರಾಯಣಪುರ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಊರಿನ ಗ್ರಾಮಸ್ಥರೇ ಸ್ವಯಂ ಲಾಕ್‌ಡೌನ್ ವಿಧಿಸಿಕೊಂಡಿದ್ದಾರೆ.

ಗ್ರಾಮದಲ್ಲಿ 40ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಊರಿನ ಪ್ರಮುಖರೊಬ್ಬರು ಕೋವಿಡ್‍ನಿಂದ ಮೃತರಾಗಿದ್ದಾರೆ. ಹೀಗಾಗಿ, ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ಸ್ವಯಂ ಲಾಕ್‌ಡೌನ್ ಮೊರೆಹೋಗಿದ್ದಾರೆ.

ನಾರಾಯಣಪುರದಲ್ಲಿ ಸುಮಾರು 350 ಮನೆಗಳಿವೆ. ಒಂದೂವರೆ ಸಾವಿರದಷ್ಟು ಜನಸಂಖ್ಯೆ ಇದೆ. ಸದ್ಯ 40ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹತ್ತು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಗ್ರಾಮದ ಪ್ರಮುಖರಾದ ಹೇಮ್ಲಾನಾಯ್ಕ ಆವರು ಮೃತರಾಗಿದ್ದಾರೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದೇ ಕಾರಣ ಕ್ಕೆ ಸಭೆ ಸೇರಿ ಸ್ವಯಂ ಲಾಕ್‌ಡೌನ್‍ಗೆ ಒಳಗಾಗಿದ್ದಾರೆ. ಗ್ರಾಮದಲ್ಲಿ ಸೋಂಕು ಕಡಿಮೆಯಾಗುವವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಗ್ರಾಮದ ಮುಖಂಡ ಕುಮಾರ್ ನಾಯ್ಕ ತಿಳಿಸಿದ್ದಾರೆ.

ಮನೆಯಿಂದ ಹೊರಬಂದರೆ ದಂಡ: ಪ್ರತಿದಿನ ಬೆಳಿಗ್ಗೆ 6ರಿಂದ 9ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಈ ಅವಧಿ ಮೀರಿ ಮನೆಯಿಂದ ಹೊರ ಬಂದರೆ ₹ 2,000 ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 9ರ ಬಳಿಕವು ಅಂಗಡಿ ತೆಗೆದಿದ್ದರೆ ಮಾಲೀಕರಿಗೆ ₹ 10,000 ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

‘ಗ್ರಾಮದವರಿಗೆ ಸರ್ಕಾರದಿಂದ ರೇಷನ್ ಪೂರೈಕೆ ಮಾಡಲಾಗಿದೆ. ಒಂದು ವೇಳೆ ಇದನ್ನು ಮೀರಿ ಅಗತ್ಯ ವಸ್ತುಗಳು ಬೇಕಿದ್ದರೆ ಊರಿನ ಮುಖಂಡರಿಗೆ ತಿಳಿಸಿದರೆ ದಿನಸಿ ಪೂರೈಕೆಗೆ ವ್ಯವಸ್ಥೆ ಮಾಡುತ್ತೇವೆ. ಜನರು ಹೊರಗೆ ಓಡಾಡದಂತೆ ತಡೆಯಲು ಮತ್ತು ಪರ ಊರಿನ ಜನರು ನಾರಾಯಣಪುರದೊಳಗೆ ಬಾರದಂತೆ ನೋಡಿಕೊಳ್ಳಲು ಕೆಲವು ಯುವಕರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು
ಗ್ರಾಮದ ಕುಮಾರ್ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT