ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರೆಂಟೈನ್‍ಗೆ ಅಡ್ಡಿಪಡಿಸಿದರೆ ಎಫ್‌ಐಆರ್: ಕ್ಯಾಪ್ಟನ್ ಮಣಿವಣ್ಣನ್ ಸೂಚನೆ

Last Updated 11 ಮೇ 2020, 14:36 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಕ್ವಾರೆಂಟೈನ್‍ಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಡೆದಸಭೆಯಲ್ಲಿ ಅವರು ಪರಿಶೀಲನೆ ನಡೆಸಿದರು.ತಮ್ಮ ಊರುಗಳು, ವಾರ್ಡ್ ವ್ಯಾಪ್ತಿಯಲ್ಲಿಕ್ವಾರೆಂಟೈನ್ ಮಾಡದಂತೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಇಂತಹ ವರ್ತನೆಯನ್ನುಗಂಭೀರವಾಗಿ ಪರಿಗಣಿಸಲಾಗುವುದು. ಇದು ಕಾನೂನು ವಿರೋಧಿನಡೆ.ಅಂತಹ ವ್ಯಕ್ತಿಗಳ ವಿರುದ್ಧಎಫ್‌ಐಆರ್ದಾಖಲಿಸಬೇಕು ಎಂದು ಎಚ್ಚರಿಸಿದರು.

ಹೊಸಬರು ಬಂದರೆ ಕಂಟ್ರೋಲ್ ರೂಂ ಕರೆ ಮಾಡಿ:ಜಿಲ್ಲೆಯ ಎಲ್ಲಾ ಚೆಕ್‍ಪೋಸ್ಟ್‌ಗಳಲ್ಲೂತಪಾಸಣೆ ಬಿಗಿಗೊಳಿಸಲಾಗಿದೆ.ಹೊರಜಿಲ್ಲೆ, ರಾಜ್ಯಗಳಿಂದ ಬರುವಪ್ರತಿಯೊಬ್ಬರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಮೂಲಕ ಬರುವವರ ಮೇಲೂ ನಿಗಾ ಇಡಲಾಗಿದೆ. ಜನರೂಜಿಲ್ಲಾಡಳಿತದ ಜತೆಸಹಕರಿಸಬೇಕು. ತಮ್ಮ ಊರಿಗೆ, ಪಕ್ಕದ ಮನೆಗೆ ಹೊರಗಿನಿಂದ ಹೊಸದಾಗಿ ಬಂದವರ ಮಾಹಿತಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ08182–221010 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ತಪಾಸಣೆ ತೀವ್ರಗೊಳಿಸಲಾಗಿದೆ.ಪ್ರತಿ ದಿನ 150 ಮಂದಿಯ ಗಂಟಲ ದ್ರವ ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವವರ ಮಾಹಿತಿ ಪ್ರತಿದಿನ ಪಡೆಯಲಾಗುತ್ತಿದೆ.ಉಸಿರಾಟದ ತೊಂದರೆ ಪ್ರಕರಣಗಳ ಮೇಲೂನಿರಂತರ ನಿಗಾ ಇರಿಸಲಾಗಿದೆ. ಬೇರೆ ರಾಜ್ಯಗಳಿಗೆ ತೆರಳ ಬಯಸುವವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಿದರೆ ಅವರಿಗೆ ಬೆಂಗಳೂರಿನಿಂದ ರೈಲಿನಲ್ಲಿ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಪಾಸ್‌ಗೆ ಸೇವಾ ಸಿಂಧು ಸೌಲಭ್ಯ:ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಬಯಸುವವರು, ಇಲ್ಲಿಂದ ಹೊರ ರಾಜ್ಯಗಳಿಗೆ ತೆರಳುವವರು. ಬೇರೆ ದೇಶಗಳಿಂದ ಇಲ್ಲಿಗೆ ಬರುವವರ ಅನುಕೂಲಕ್ಕಾಗಿ ಸರ್ಕಾರ ಸೇವಾ ಸಿಂಧುಆ್ಯಪ್‌ಸೌಲಭ್ಯ ಕಲ್ಪಿಸಿದೆ. ಆ್ಯಪ್ ಮೂಲಕ ಹೆಸರು ನೊಂದಾಯಿಸಿ ಪಾಸ್ಪಡೆಯಬಹುದು.ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹೆಲ್ಪ್‍ಲೈನ್ ಸಂಖ್ಯೆ 080-22636800 ಸಂಪರ್ಕಿಸಬಹುದು ಎಂದುವಿವರ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ,ಪಾಲಿಕೆ ಆಯುಕ್ತ ಚಿದಾನಂದ ವಟಾರೆ,ವೈದ್ಯಕೀಯ ಕಾಲೇಜುನಿರ್ದೇಶಕ ಡಾ.ಗುರುಪಾದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT