ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಪೊಲೀಸರ ಹೆಸರಿನಲ್ಲಿ ವಂಚನೆ: ಮೂವರ ಬಂಧನ

Published 27 ಜೂನ್ 2024, 16:23 IST
Last Updated 27 ಜೂನ್ 2024, 16:23 IST
ಅಕ್ಷರ ಗಾತ್ರ

ಶಿವಮೊಗ್ಗ: ಪೊಲೀಸರ ಹೆಸರಲ್ಲಿ ಯುವಕನಿಗೆ ವಂಚನೆ ಮಾಡಿದ್ದ ಮೂವರನ್ನು ಇಲ್ಲಿನ ಜಯನಗರ ಹಾಗೂ ಸಿಇಎನ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯ ನಿವಾಸಿ ಇಬ್ರಾಹಿಂ ಬಾದಷಾ ಅಲಿಯಾಸ್ ರಿಷಿಕ್ ಸ್ಯಾಮ್ (26), ಕುಮಾರಸ್ವಾಮಿ ಲೇಔಟ್‌ನ ಜನಾರ್ದನ (21) ಹಾಗೂ ಹನುಮಂತ (38) ಬಂಧಿತರು. ಆರೋಪಿಗಳಿಂದ ₹1500 ನಗದು ಹಣ ಹಾಗೂ ಮೊಬೈಲ್ ಪೊನ್   ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗದ ಕೋಟೆ ಗಂಗೂರು ನಿವಾಸಿ ಪ್ರದೀಪ್ ಎಂಬುವವರಿಗೆ ಚಿಕ್ಕಮಗಳೂರು ಪೊಲೀಸರ ಹೆಸರಲ್ಲಿ ಕಳೆದ ಭಾನುವಾರ ಕರೆ ಮಾಡಿದ್ದ ಆರೋಪಿಗಳು, ಮಹಿಳೆಯೊಬ್ಬರಿಗೆ ನೀವು ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದೀರಿ. ಆಕೆ ದೂರು ನೀಡಿದ್ದಾರೆ ಎಂದು ಹೇಳಿ ಹೆದರಿಸಿದ್ದರು. ನಂತರ ಫೋನ್‌ ಪೇ ಮುಖಾಂತರ ₹23 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರದೀಪ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT