ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಘರ್ಷಣೆ: ಸಹಜಸ್ಥಿತಿಯತ್ತ ಹಾರೋಬೆನವಳ್ಳಿ

Last Updated 13 ನವೆಂಬರ್ 2022, 6:32 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಸಮೀಪದ ಹಾರೋಬೆನವಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಿವೇಶನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆ ಸಂಬಂಧ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮ ಸಹಜ ಸ್ಥಿತಿಗೆ ಮರಳಿದೆ.

ನಿವೇಶನ ಹಂಚಿಕೆ ಸಂಬಂಧ ರಸೂಲ್ ಹಾಗೂ ರಾಕೇಶ್‌ ಎಂಬುವವರು ಮಧ್ಯೆ ಜಗಳವಿತ್ತು. ಈ ವಿಚಾರ ಸಂಬಂಧ ರಸೂಲ್‌ ಗುಂಪಿನೊಂದಿಗೆ ಬಂದು ಹಲ್ಲೆ ನಡೆಸಿದ್ದ ಎಂದು ದೂರು ದಾಖಲಾಗಿತ್ತು.

‘ನನ್ನ ನಿವೇಶನದಲ್ಲಿ ರಸೂಲ್‌ ಎರಡು ತಿಂಗಳಿಂದ ಶೆಡ್ ನಿರ್ಮಿಸಿದ್ದ. ಇದನ್ನು ತೆರವು ಮಾಡುವಂತೆ ಹಲವು ಬಾರಿ ತಿಳಿಸಿದ್ದರೂ ತೆರವು ಮಾಡಿರಲಿಲ್ಲ.ಶುಕ್ರವಾರ ಶೆಡ್‌ ಒಂದು ಕಂಬ ತೆಗೆದಿದ್ದೆ. ಸಂಜೆ 8 ರಿಂದ 10 ಯುವಕರ ಗುಂಪಿನೊಂದಿಗೆ ಬಂದ ರಸೂಲ್ ಹಲ್ಲೆ ನಡೆಸಿದ್ದ’ ಎಂದು ರಾಕೇಶ್‌ ದೂರು ನೀಡಿದ್ದರು.

ರಾಕೇಶ್‌ ಕೂಡ ಗುಂಪಿನೊಂದಿಗೆ ಬಂದು ರಸೂಲ್‌ ಮೇಲೆ ಹಲ್ಲೆಗೆ ಮುಂದಾಗಿದ್ದ. ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.

ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ 8 ಜನರನ್ನು ವಶಕ್ಕೆ ಪಡೆದಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥನ್ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT