ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ವಿರುದ್ಧ ಅವಹೇಳನ; ಕ್ರಮಕ್ಕೆ ಒತ್ತಾಯ

Last Updated 14 ಮೇ 2020, 11:41 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಮುಸ್ಲಿಂ ಸಮುದಾಯ ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸುತ್ತಿರುವಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗುರುವಾರ ಶಿವಮೊಗ್ಗ ಪೀಸ್ ಆರ್ಗನೈಜೇಶನ್ ಕಾರ್ಯಕರ್ತರು ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಕೆಲವು ಮಾಧ್ಯಮಗಳೂ ಮುಸ್ಲಿಂ ಸಮುದಾಯದ ವಿರುದ್ಧ ನಿರಂತರಅಪಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂಸುಳ್ಳೂ ಸುದ್ದಿಗಳನ್ನು ಹಬ್ಬಿಸಿ, ಒಂದಕ್ಕೊಂದು ಸಂಬಂಧವೇ ಇರದ ವೀಡಿಯೊತುಣುಕುಗಳನ್ನುಸಿದ್ಧಪಡಿಸಿ, ಜಾಲ ತಾಣಗಳಿಗೆ ಅಪ್‌ಲೋಡ್ ಮಾಡುತ್ತಿದ್ದಾರೆ. ಸಮಾಜದಶಾಂತಿ ಕದಡುತ್ತಿದ್ದಾರೆ. ಕೆಲವರು ಮುಸ್ಲಿಮರನ್ನು ಮನುಷ್ಯರುಎನ್ನುವುದನ್ನೇಮರೆತಂತೆ ಕಾಣುತ್ತದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯಕ್ಕೆ ಸೇರಿದ ಅಧಿಕಾರಿಗಳು, ಪೊಲೀಸರು, ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು, ಲ್ಯಾಬ್‌ಗಳಲ್ಲಿಕೆಲಸ ಮಾಡುವವರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರುಜಾತಿ, ಭೇದಮರೆತು ತಮ್ಮದೇ ಕಷ್ಟ ಎಂಬಂತೆ ಹಗಲು ರಾತ್ರಿಕೆಲಸ ಮಾಡುತ್ತಿದ್ದಾರೆ. ಅವರ ಮನಸ್ಸಿಗೆ ನೋವಾಗುವಂತೆ ವಿಚಿತ್ರ ಹೆಸರುಗಳ ಮೂಲಕ ಅವರನ್ನು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

ತಬ್ಲಿಗ್‌ ಸೋಂಕು, ವೈರಸ್, ನಂಜು, ವಿಷ, ಅಜ್ಮೀರ್ ಸೋಂಕು ಎಂದು ವಿಚಿತ್ರ ಹೆಸರುಗಳಲ್ಲಿ ಕರೆದುಕೆಟ್ಟವಿಡಿಯೊಗಳನ್ನು ಹರಿಬಿಡುತ್ತಿದ್ದಾರೆ.ಮಾನವೀಯ ಮೌಲ್ಯವನ್ನೇ ಕಳೆದುಕೊಂಡಿದ್ದಾರೆ. ಇದು ತಪ್ಪಬೇಕು. ರೋಗದ ವಿರುದ್ಧ ಹೋರಾಟ ಮಾಡಬೇಕು. ರೋಗಿ ಕುಲ, ಜಾತಿ, ಧರ್ಮ ನೋಡಬಾರದು. ಅಂತಹ ಮನೋಸ್ಥಿತಿ ಇರುವವರನ್ನು ಬಂಧಿಸಬೇಕು. ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಕಾರ್ಯದರ್ಶಿ ಸೈಯದ್ ಸೈಫುಲ್ಲಾ, ಮುಖಂಡರಾದ ಸೈಯದ್ ಜುಬೇರ್, ಸೈಯದ್ ಸಮೀವುಲ್ಲಾ, ಸಲೀಂ ಅಹಮದ್‌, ನಗರಘಟಕದ ಅಧ್ಯಕ್ಷ ಹಮೀದ್ ಉಲ್ಲಾಖಾನ್, ಶಫಿವುಲ್ಲಾ, ಮೌಲಾನ ಇಮ್ರಾನ್ ಸೈಯದ್ ನುಮಾನ್, ಮಹಿಳಾ ವಿಭಾಗದ ಅಧ್ಯಕ್ಷೆಎಹಸಾಸ್ ಎ ನಾಯಬ್, ವಹೀದಾ, ಫಿರ್ದೋಸ್ ಮುಮ್ತಾಜ್, ಯಸ್ಮಿನ್, ಫರ್ಹೀನ್ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT