ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ ಹೆಸರಿನಲ್ಲಿ ಮಾನಸಿಕ ಭ್ರಷ್ಟತೆ: ಮಹದೇವಪ್ಪ

Last Updated 24 ಮೇ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ದೇಶದೊಳಗೆ ರಾಮ ಎಂದು ಹೇಳಿ, ಹೊರ ದೇಶದಲ್ಲಿ ಬುದ್ಧ ಎನ್ನುವುದು ಯಾವ ಕಾರಣಕ್ಕೆ’ ಎಂದು ಕಾಂಗ್ರೆಸ್‌ ನಾಯಕ ಎಚ್‌.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ತಮ್ಮ ದುರಾಡಳಿತ ಮತ್ತು ದ್ವೇಷದ ಮೂಲಕ ರಾಮ ಮತ್ತು ಬುದ್ಧನ ಮರ್ಯಾದೆ ಕಳೆದಿರುವ ಬಿಜೆಪಿಯ ಕೋಮುವಾದಿಗಳು ಮೊದಲು ಸಹಜ ಮನುಷ್ಯರಾಗಬೇಕು. ಜಪಾನ್‌ಗೆ ಹೋಗಿ ಬುದ್ಧನ ಮಾರ್ಗ ಅನುಸರಿಸುವ ಅಗತ್ಯವಿದೆ ಎನ್ನುತ್ತಿರುವ ಪ್ರಧಾನಿಯವರು ಆ ಅಗತ್ಯ ಮೊದಲು ತಮಗಿದೆ ಎನ್ನುವುದನ್ನು ಮನಗಾಣಬೇಕು ಎಂದು ಹೇಳಿದ್ದಾರೆ.

ದೇಶದ ಒಳಗೆ ಯುದ್ಧ, ದೇಶದ ಹೊರಗೆ ಬುದ್ಧ ಎನ್ನುವ ಆತ್ಮದ್ರೋಹದ ಮಾತುಗಳು ನಿಲ್ಲಬೇಕು. ಪುರಾಣದ ಪುಸ್ತಕದೊಳಗಿರುವ ರಾಮ ಏನೂ ಮಾಡಲಾರ ಮತ್ತು ಕೇಳಲಾರ ಎಂಬ ಸ್ಪಷ್ಟತೆ ಇವರಿಗೆ ಇರುವುದರಿಂದಲೇ ರಾಮನ ಹೆಸರಿನಲ್ಲಿ ಮಾನಸಿಕ ಭ್ರಷ್ಟರಾಗಿ ರಾಮನ ಮಾನ ಕಳೆಯುತ್ತಿದ್ದಾರೆ. ಒಂದು ವೇಳೆ ಪುಸ್ತಕದ ರಾಮ ಜೀವವಿದ್ದಿದ್ದರೆ ಬಿಜೆಪಿಗರ ಮೇಲೆ ಮಾನನಷ್ಟ ಹೂಡುತ್ತಿದ್ದ ಎಂದು ಮಹದೇವಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT