ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚನೆಗೆ ಸಹಕರಿಸಿದವರಿಗೆ ಪರಿಷತ್‌ ಟಿಕೆಟ್‌: ಈಶ್ವರಪ್ಪ

Last Updated 13 ಜೂನ್ 2020, 14:19 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಂಗ್ರೆಸ್, ಜೆಡಿಎಸ್‌ ತೊರೆದು ಬಿಜೆಪಿಗೆ ಬಂದು ಸರ್ಕಾರ ರಚನೆಗೆ ಸಹಕರಿಸಿದವರಿಗೆವಿಧಾನ ಪರಿಷತ್ ಟಿಕೆಟ್‌ ಖಚಿತ‌ಎಂದು ಸಚಿವ ಕೆ.ಎಸ್.ಈಶ್ವರಪ್ಪಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ವಿಧಾನ ಪರಿಷತ್ ಚುನಾವಣೆಬಳಿಕಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರ ನಾಯಕರು, ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುವರು. ವಿಸ್ತರಣೆ ಅಥವಾ ಪುನರ್‌ರಚನೆಯೇಎಂಬ ಪ್ರಶ್ನೆಗೆ, ಅದು ಮುಖ್ಯಮಂತ್ರಿ,ವರಿಷ್ಠರುಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದರು.

ರಾಜ್ಯಸಭೆ, ವಿಧಾನ ಪರಿಷತ್ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯೇಭಿನ್ನ.ರಾಜ್ಯಸಭೆಗೆ ರಾಜ್ಯದಿಂದ ಕಳುಹಿಸಿದ್ದ ಅಭ್ಯರ್ಥಿಗಳ ಬದಲು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಲಾಯಿತು.ವಿಧಾನ ಪರಿಷತ್ ಆಯ್ಕೆ ರಾಜ್ಯದ ಹಿತಾಸಕ್ತಿಗೆ ಪೂರಕವಾಗಿರಲಿದೆ. ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಿಗೆ ಆದ್ಯತೆ ದೊರೆಯಲಿದೆ.ಜತೆಗೆ, ಪಕ್ಷಕ್ಕೆ ದುಡಿದವರಿಗೂ ಅವಕಾಶ ಸಿಗಲಿದೆ ಎಂದು ಸುಳಿವು ನೀಡಿದರು.

ಬೆಂಗಳೂರಿನಬಿಜೆಪಿ ಕಚೇರಿಯಲ್ಲಿಜೂನ್‌ 15ರ ಸಂಜೆ 4ಕ್ಕೆ ಪಕ್ಷದ ಕೋರ್‌ಕಮಿಟಿ ಸಭೆ ನಡೆಯಲಿದೆ. ಮುಂದಿನ 3 ವರ್ಷ ಸರ್ಕಾರದ ಸುಭದ್ರತೆ ಗಮನದಲ್ಲಿ ಇಟ್ಟುಕೊಂಡುಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ನಂತರಪಕ್ಷದಕೇಂದ್ರ ಚುನಾವಣಾ ಸಮಿತಿಗೆ ಕಳಿಸಲಾಗುವುದು. ಬಿಜೆಪಿ ಜಾತಿಗೆ ಎಂದೂ ಮಣೆ ಹಾಕುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT