ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: 12 ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ

Published : 11 ಸೆಪ್ಟೆಂಬರ್ 2024, 16:13 IST
Last Updated : 11 ಸೆಪ್ಟೆಂಬರ್ 2024, 16:13 IST
ಫಾಲೋ ಮಾಡಿ
Comments

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘವು ನೀಡುವ ಬಹುಮಾನಕ್ಕೆ 2023ರಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯದ 12 ವಿವಿಧ ಪ್ರಕಾರದ ಪುಸ್ತಕಗಳು ಆಯ್ಕೆಯಾಗಿವೆ.

‘ಬಹುಮಾನವು ತಲಾ ₹ 10,000 ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಬಹುಮಾನ ವಿತರಣೆ ಸಮಾರಂಭ ಸೆ.22ರಂದು ಸಂಘದ ಸಭಾಭವನದಲ್ಲಿ ನಡೆಯಲಿದೆ’ ಎಂದು ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕುವೆಂಪು ಕಾದಂಬರಿ ಬಹುಮಾನವು ಲೇಖಕ ಕೆ.ಬಿ.ಪವಾರ ಅವರ ‘ಕೊಳ್ಳ’ ಪುಸ್ತಕ, ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಅನುವಾದ ಬಹುಮಾನವು ರಾಜಾರಾಂ ತಲ್ಲೂರು ಅವರ ‘ಎಂ.ಡಾಕ್ಯೂಮೆಂಟ್’, ಎಂ.ಕೆ. ಇಂದಿರಾ ಮಹಿಳಾ ಸಾಹಿತ್ಯ ಬಹುಮಾನವು ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಇರುವಿನ ಅರಿವು’, ಮುಸ್ಲಿಂ ಬರಹಗಾರರಿಗೆ ಪಿ.ಲಂಕೇಶ್ ಹೆಸರಿನಲ್ಲಿ ಕೊಡಮಾಡುವ ಬಹುಮಾನವು ಹಬೀಬ್ ಅಬ್ರ ಅವರ ‘ಸಂಪಿಗೆಯ ಪರಿಮಳ’ ಕೃತಿಗೆ ಲಭಿಸಿದೆ.

ಜಿ.ಎಸ್‌.ಶಿವರುದ್ರಪ್ಪ ಹೆಸರಿನ ಕವನ ಸಂಕಲನ ಬಹುಮಾನವು ಎಸ್.ಎಸ್. ಚಾಂದ್‌ಪಾಷ ಅವರ ‘ಒದ್ದೆಗಣ್ಣಿನ ದೀಪ’, ಹಾ.ಮಾ.ನಾಯಕ ಅಂಕಣ ಬರಹ ಬಹುಮಾನವು ಗುರುರಾಜ್ ಎಸ್. ದಾವಣಗೆರೆ ಅವರ ‘ಹಸಿರು ಮಂಥನ’, ಯು.ಆರ್.ಅನಂತಮೂರ್ತಿ ಸಣ್ಣ ಕಥಾ ಸಂಕಲನ ಬಹುಮಾನವು ಗೋವಿಂದರಾಜು ಎಂ. ಕಲ್ಲೂರು ಅವರ ‘ನಕ್ಷತ್ರಕ್ಕಂಟದ ಮುಟ್ಟಿನ ನೆತ್ತರು’ ಕೃತಿಗೆ ಲಭಿಸಿದೆ.

ಕೆ.ವಿ. ಸುಬ್ಬಣ್ಣ ನಾಟಕ ಬಹುಮಾನವು ಶಿವಕುಮಾರ್‌ ಮಾವಲಿ ಅವರ ‘ಒಂದು ಕಾನೂನಾತ್ಮಕ ಕೊಲೆ’, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರವಾಸ ಸಾಹಿತ್ಯ ಬಹುಮಾನವು ರಹಮತ್ ತರೀಕೆರೆ ಅವರ ‘ಜೆರುಸಲೇಂ’ ಪುಸ್ತಕ, ಹಸೂಡಿ ವೆಂಕಟಶಾಸ್ತ್ರಿ ಹೆಸರಿನ ವಿಜ್ಞಾನ ಸಾಹಿತ್ಯ ಬಹುಮಾನವು ಎಸ್.ಎನ್.ಹೆಗಡೆ ಅವರ ‘ಜೀವವೈವಿಧ್ಯ, ವನ್ಯಜೀವಿಗಳು ಮತ್ತು ಸಂರಕ್ಷಣೆ’, ನಾ.ಡಿಸೋಜ ಮಕ್ಕಳ ಸಾಹಿತ್ಯ ಬಹುಮಾನವು ಲಲಿತಾ ಹೊಸಪ್ಯಾಟಿ ಅವರ ‘ಬ್ಯೂಟಿ ಬೆಳ್ಳಕ್ಕಿ’ ಹಾಗೂ ಎಚ್.ಡಿ.ಚಂದ್ರಪ್ಪಗೌಡ ಹೆಸರಿನ ವೈದ್ಯ ಸಾಹಿತ್ಯ ಬಹುಮಾನವು ಡಾ.ಲಕ್ಷ್ಮಿ ಶ್ರೀನಿವಾಸನ್ ಅವರ ‘ಕಣ್ಣು ಬೆರಗು ಬವಣೆ’ ಪುಸ್ತಕಕ್ಕೆ ಲಭಿಸಿವೆ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT