ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಣಂದೂರು: ರಾಷ್ಟ್ರೀಯ ವಸತಿ ಶಾಲೆಗೆ ಪ್ರಶಸ್ತಿ

Published 11 ಜುಲೈ 2024, 14:24 IST
Last Updated 11 ಜುಲೈ 2024, 14:24 IST
ಅಕ್ಷರ ಗಾತ್ರ

ಕೋಣಂದೂರು: ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಜುಲೈ 8 ಮತ್ತು 9ರಂದು ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಸಿಐಎಸ್‌ಸಿ ಸ್ಪೋರ್ಟ್ಸ್ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪ್ರಾಂತೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. 

25 ಕೆ.ಜಿ ವಿಭಾಗದಲ್ಲಿ 7ನೇ ತರಗತಿ ಮಹಮದ್ ತಬ್ಜಲ್ ದ್ವಿತೀಯ ಸ್ಥಾನ, 25-30 ಕೆ.ಜಿ. ವಿಭಾಗದಲ್ಲಿ 8ನೇ ತರಗತಿ ಎಚ್.ಎಂ.ಗುರುಪ್ರಸಾದ್ ದ್ವಿತೀಯ ಸ್ಥಾನ, 30-34 ಕೆ.ಜಿ.ವಿಭಾಗದಲ್ಲಿ 7ನೇ ತರಗತಿ ಎಚ್.ಎಂ.ಯೋಗಿನಿ ದ್ವಿತೀಯ ಸ್ಥಾನ, 56-60 ಕೆ.ಜಿ.ವಿಭಾಗದಲ್ಲಿ 9ನೇ ತರಗತಿಯ ಮಾನ್ವಿ ಶೆಟ್ಟಿ ತೃತೀಯ ಸ್ಥಾನ, 22-26 ಕೆ.ಜಿ.ವಿಭಾಗದಲ್ಲಿ 7ನೇ ತರಗತಿ ಯು.ನಮಿತಾ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT