ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ರಹಿತ ನೇಮಕಾತಿಗೆ ಆದ್ಯತೆ ಅಗತ್ಯ

30ನೇ ಘಟಿಕೋತ್ಸವದಲ್ಲಿ ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ವಿ.ಕೃಷ್ಣಭಟ್ಟ ಅಭಿಮತ
Last Updated 29 ಜುಲೈ 2020, 14:23 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿಕ್ಷಣ ಕ್ಷೇತ್ರ ಹಿತದಲ್ಲಿಟ್ಟುಕೊಳ್ಳುವರಾಜಕಾರಣಿಗಳ ತವಕ ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆಎಂದು ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ವಿ.ಕೃಷ್ಣಭಟ್ಟ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ 30ನೇ ಘಟಿಕೋತ್ಸವ ಸಮಾರಂಭದಲ್ಲಿ ಆನ್‌ಲೈನ್‌ ಮೂಲಕ ಅವರುಘಟಿಕೋತ್ಸವ ಭಾಷಣ ಮಾಡಿದರು.

ವಿಶ್ವವಿದ್ಯಾಲಯ ಕುಲಪತಿಗಳು ಹಾಗೂಇತರ ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ, ಹಣದ ವ್ಯವಹಾರವಂತೂ ಬಹಿರಂಗ ಚರ್ಚೆಯ ವಿಷಯವಾಗಿದೆ. ಆಡಳಿತ ಮಟ್ಟದಲ್ಲೇ ಭ್ರಷ್ಟಚಾರ ತುಂಬಿ ತುಳುಕುತ್ತಿದೆ. ಆವ್ಯವಸ್ಥೆಯ ಮೂಲಕ ಹೊರಬರುವ ವಿದ್ಯಾರ್ಥಿಗಳಲ್ಲಿ ಮೌಲ್ಯ ಪ್ರಜ್ಞೆ, ಪರಿಶುದ್ದ ಸಾರ್ವಜನಿಕ ನಡವಳಿಕೆ ಗುಣಗಳು ಬಾಡುತ್ತಿವೆ ಎಂದುಕಳವಳ ವ್ಯಕ್ತಪಡಿಸಿದರು.

ಇಂದು ಶಿಕ್ಷಣ ವ್ಯಾಪಾರೀಕರಣದ ಸರಕಾಗಿ ಮಾರ್ಪಾಟ್ಟಿದೆ.ಹಲವುಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳಾಗಿವೆ. ವ್ಯಾಪರಿ ವಲಯದಲ್ಲಿ ಕಾಣಬರುವ ಕಾಳಸಂತೆ, ಲಾಭಕೋರತನ ಎಲ್ಲವೂ ಶಿಕ್ಷಣ ಕ್ಷೇತ್ರ ಆವರಿಸಿಕೊಂಡಿವೆ.ಪ್ರಶ್ನೆಪತ್ರಿಕೆ ರಚನೆ, ಉತ್ತರ ಪತ್ರಿಕೆಗಳ ಪರಿಶೀಲನೆ, ಪರೀಕ್ಷಕರ ನೇಮಕಾತಿಯಲ್ಲೂ ಅವ್ಯವಹಾರದ ಆರೋಪಗಳು ಸಾಮಾನ್ಯವಾಗಿವೆ. ಕಾಲೇಜಿಗೆ ದಾಖಲಾದರೆ ಸಾಕು, ನಿಮಗೆ ಉತ್ತಮ ದರ್ಜೆಯಲ್ಲಿ ತೇರ್ಗಡೆಯ ಭರವಸೆ ಕೊಡುತ್ತೇವೆ ಎಂಬ ಪ್ರಚಾರಗಳೂ ಪರದೆಯೊಳಗೆ ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ನ್ಯಾಯಾಲಯದ ವ್ಯವಸ್ಥೆ ಇರುವಂತೆ ವಿಶ್ವವಿದ್ಯಾಲಯದ ಆಡಳಿತ ಹಾಗೂ ನೇಮಕಾತಿಯನ್ನು ರಾಜಕೀಯ ನಿಯಂತ್ರಣದಿಂದ ಪ್ರತೇಕಪಡಿಸಿ ನ್ಯಾಯಧೀಶರ ನೇತೃತ್ವದಲ್ಲಿ ಸ್ವಾಯತ್ತ ಸಂಸ್ಥೆ ಸ್ಥಾಪಿಸಬೇಕು ಎಂಬ ಸಲಹೆ ನೀಡಲಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದೆ, ಅರ್ಹತೆ, ಪ್ರತಿಭೆ ಆಧಾರದ ಮೇಲೆ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವ ಪ್ರೊ.ಎಸ್‌.ಎಸ್‌.ಪಾಟೀಲ್‌, ಪರೀಕ್ಷಾಂಗ ಪ್ರೊ.ಎಂ. ವೆಂಕಟೇಶ್ವರಲು, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಎಂ.ಆರ್.ಸತ್ಯಪ್ರಕಾಶ್ , ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT