ಶಿವಮೊಗ್ಗ: ಪ್ರಶ್ನೆಪತ್ರಿಕೆಯಲ್ಲಿನ ಗೊಂದಲದಿಂದಾಗಿ ಕುವೆಂಪು ವಿಶ್ವವಿದ್ಯಾಲಯದ ಬಿ.ಎ. 6ನೇ ಸೆಮಿಸ್ಟರ್ನ ಕನ್ನಡ ಐಚ್ಛಿಕ ವಿಷಯದ ಪರೀಕ್ಷೆಯನ್ನು ದಿಢೀರ್ ರದ್ದುಗೊಳಿಸಲಾಗಿದೆ.

ಶನಿವಾರ ಪರೀಕ್ಷೆ ನಿಗದಿಯಾಗಿತ್ತು. ಬೆಳಿಗ್ಗೆ 9ಕ್ಕೆ ಲಕೋಟೆ ತೆರೆದಾಗ ಪ್ರಶ್ನೆಪತ್ರಿಕೆಯ ಶಿರೋನಾಮೆ ಸರಿ ಇತ್ತು. ಆದರೆ, ಹಳೆಯ ಪತ್ರಿಕೆಯಲ್ಲಿನ ಪ್ರಶ್ನೆಗಳೇ ಮುದ್ರಿತವಾಗಿದ್ದವು.

ಇದನ್ನು ಗಮನಿಸಿದ ಸಿಬ್ಬಂದಿ ಅದಾಗಲೇ ವಿತರಿಸಿದ್ದ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳಿಂದ ಹಿಂಪಡೆದು ಮನೆಗೆ ಕಳುಹಿಸಿದರು. ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಸಹಿತ ಇತರ ಮಾಹಿತಿಯನ್ನು ಅವುಗಳಲ್ಲಿ ಭರ್ತಿ ಮಾಡಿದ್ದರು.

‘ತಾಂತ್ರಿಕ ಕಾರಣದಿಂದ ಕನ್ನಡ ಐಚ್ಛಿಕ ಪರೀಕ್ಷೆ ಮುಂದೂಡಲಾಗಿದೆ. ಮುಂದಿನ ದಿನಾಂಕ ತಿಳಿಸಲಾಗುವುದು’ ಎಂಬ ಸಂದೇಶವನ್ನು ವಾಟ್ಸ್ಆ್ಯಪ್ ಮೂಲಕ ಎಲ್ಲಾ ಕಾಲೇಜುಗಳಿಗೆ ರವಾನಿಸಲಾಯಿತು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.