ಉರುಳು ಹಾಕಿದರೆ ಕೊಡುವ ಶಿಕ್ಷೆಯ ತೀವ್ರತೆಯ ಬಗ್ಗೆ ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಕೂಂಬಿಂಗ್ ನಡೆಸಲು ಸೋಮವಾರ ಸಭೆ ನಡೆಸಿ ಅರಣ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ.
ಕೆ.ಟಿ.ಹನುಮಂತಪ್ಪ ಸಿಸಿಎಫ್ ಶಿವಮೊಗ್ಗ
ಬಹಳಷ್ಟು ಕಡೆ ಆನೆ ನಿರೋಧಕ ಕಂದಕ (ಇಪಿಟಿ)ಗಳಲ್ಲಿ ಉರುಳು ಹಾಕಲಾಗುತ್ತಿದೆ. ಅಲ್ಲಿ ಹುಲ್ಲು ಬೆಳೆಯುವುದರಿಂದ ಗೊತ್ತಾಗದೇ ಪ್ರಾಣಿಗಳು ಬಂದು ಬೀಳುತ್ತಿವೆ. ಹೀಗಾಗಿ ಅಲ್ಲಿಯೂ ಕೂಂಬಿಂಗ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.