ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ಕೆರೆ– ಕಾನು ಸಂರಕ್ಷಣಾ ಸಮಾವೇಶ ಇಂದು

-
Published 2 ನವೆಂಬರ್ 2023, 19:31 IST
Last Updated 2 ನವೆಂಬರ್ 2023, 19:31 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆರೆ ಅತಿಕ್ರಮಣ ತೆರವು ಕಾರ್ಯಾಚರಣೆ ಹಕ್ಕೊತ್ತಾಯಕ್ಕಾಗಿ ರಾಜ್ಯಮಟ್ಟದ ಮಲೆನಾಡು ಕೆರೆ– ಕಾನು ಸಂರಕ್ಷಣಾ ಸಮಾವೇಶ ನ. 3ರಂದು ಜಿಲ್ಲೆಯ ಸೊರಬ ತಾಲ್ಲೂಕಿನ ಉದ್ರಿ ಗ್ರಾಮದ ಕೋಟೆ ಕೆರೆ ಬಳಿ ನಡೆಯಲಿದೆ.

ಬರಗಾಲದ ಗಂಭೀರ ಸ್ಥಿತಿಯಲ್ಲಿ ಕೆರೆ–ಕಾನು ಉಳಿಸಿ ಅಭಿಯಾನ ಬಲಗೊಳಿಸುವ ಬಗ್ಗೆ ಈ ವಿಶೇಷ ಸಮಾಲೋಚನಾ ಸಮಾವೇಶವನ್ನು ವೃಕ್ಷಲಕ್ಷ ಆಂದೋಲನ, ಪರಿಸರ ಜಾಗೃತಿ ಸಂಸ್ಥೆ ಹಾಗೂ ಜೀವವೈವಿಧ್ಯ ಸಮಿತಿಗಳು ಜಂಟಿಯಾಗಿ ಸಂಘಟಿಸಿವೆ.

ಅರಣ್ಯ–ಪರಿಸರ ವಿಜ್ಞಾನಿಗಳಾದ ಟಿ.ವಿ. ರಾಮಚಂದ್ರ, ಡಾ.ಕೇಶವ ಎಚ್. ಕೊರ್ಸೆ, ರಾಜ್ಯ ಕೆರೆ ನಿರ್ವಹಣಾ ಸಂಘಗಳ ಒಕ್ಕೂಟದ ಅಧ್ಯಕ್ಷ ನಾಗರಾಜಯ್ಯ, ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ.ಶೇಜೇಶ್ವರ, ಅರಣ್ಯ ಇಲಾಖೆ ಪಿಸಿಸಿಎಫ್ ಬ್ರಿಜೇಶಕುಮಾರ್, ಜೀವವೈವಿಧ್ಯ ಮಂಡಳಿ ಮುಖ್ಯಸ್ಥ ಡಾ.ಜಗತ್‌ರಾಮ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು ಈ ಸಮಾವೇಶಕ್ಕೆ ಬರುವಂತೆ ಸಂಘಟಕರು ಕೋರಿದ್ದಾರೆ. ಸಂಪರ್ಕ ಸಂಖ್ಯೆ: 8197553400.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT