ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವ

Last Updated 6 ಅಕ್ಟೋಬರ್ 2022, 4:06 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸುತ್ತಮುತ್ತಲು ಭೂಮಿ ಕಂಪಿಸಿದ ಅನುಭವವಾಗಿದೆ.

ಬೆಳಗ್ಗಿನ ಜಾವ 3.55 ರ ಸಮಯದಲ್ಲಿ ಎರಡು ಸಾರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.

ಮೊದಲ ಸಲ ಜೋರಾಗಿ ಭೂಮಿ ಕಂಪಿಸಿದ ಅನುಭವ ಆದರೇ, ಎರಡನೇ ಸಲ ಕಂಪಿಸಿದ ಪ್ರಮಾಣ ಕಡಿಮೆ ಎನ್ನಿಸಿದೆ. ಯಾವುದೇ, ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.

4.1 ರ ಪ್ರಮಾಣದಲ್ಲಿ ಭೂಮಿ ಹಂಪಿಸಿದೆ, ಶಿರಾಳಕೊಪ್ಪ ಪಟ್ಟಣದ 3 ಕಿ.ಮೀ ಸುತ್ತಳತೆಯಲ್ಲಿ ಭೂಕಂಪನ ಕೇಂದ್ರಿತವಾಗಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟನೆ ನೀಡಬೇಕಾಗಿದೆ.

ಈ ಬಗ್ಗೆ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ಕಾವಲುಗಾರ ಚಂದ್ರು ಮಾತನಾಡಿ, ತಾವೂ ಇಬ್ಬರು ರಾತ್ರಿ ದೇವಸ್ಥಾನದ ಕಾವಲು ಕಾಯುತ್ತಿದ್ದೆವು, ಬೆಳಗ್ಗಿನ ಜಾವಇಡೀ ದೇವಸ್ಥಾನವೇ ಅಲುಗಾಡಿದ ಅನುಭವ ಆಯಿತು ಎಂದರು.

ನಿವಾಸಿ ಸುಧಾಕರ ಮಾತನಾಡಿ, ಕಂಪಿಸಿದ ಸದ್ದಿಗೆ ಭಯದಿಂದ ಎದ್ದು ಕುಳಿತುಕೊಂಡೆ ಎರಡು ಬಾರಿ ಈ ಅನುಭವಾಗಿದೆ ಎಂದರು.

ಶಿಕ್ಷಕ ಹಿರೇಜಂಬೂರು ರಮೇಶ್‌ ಪ್ರತಿಕ್ರಿಯಿಸಿ, ಮೊದಲ ಸಲ ಆದಾಗ ಜೋರಾದ ಕಂಪನವಿತ್ತು, ಎರಡನೇ ಬಾರಿ ಶಬ್ದ ಹೆಚ್ಚಾಗಿತ್ತು ಎಂದರು.
ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನಾಗರಿಕರು ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಭೂ ಕಂಪನ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಿಕಾರಿಪುರ ತಹಶೀಲ್ದಾರ್ ಅವರನ್ನು ಶಿರಾಳಕೊಪ್ಪಕ್ಕೆ ಕಳುಹಿಸಿದ್ದೇನೆ. ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಉಸ್ತುವಾರಿ ಕೋಶಕ್ಕೂ ಮಾಹಿತಿ ಕೇಳಲಾಗಿದೆ' ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT