ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕೆ ಸರ್ವ ಪಕ್ಷಗಳ ಸಹಕಾರ ಅಗತ್ಯ: ಬಸವರಾಜು

Last Updated 1 ಜೂನ್ 2020, 16:25 IST
ಅಕ್ಷರ ಗಾತ್ರ

ಶಿವಮೊಗ್ಗ: ಅಭಿವೃದ್ಧಿ ಕಾರ್ಯಗಳ ಸಮರ್ಪ‍ಕ ಅನುಷ್ಠಾನಕ್ಕೆ ಸರ್ವ ಪಕ್ಷಗಳ ಸಹಕಾರ ಅಗತ್ಯ. ಶಿವಮೊಗ್ಗ ನಗರದ ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಲಾಗುವುದು ಎಂದುನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಸ್ಮಾರ್ಟ್‌ಸಿಟಿ’ಕಾಮಗಾರಿಗಳು, ಪಾಲಿಕೆಯ ಅಮೃತ್ ಯೋಜನೆಯಲ್ಲಿಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

₹ 80 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಾಗಿದೆ. ಜನೋಪಯೋಗಿ, ರಚನಾತ್ಮಕವಾದ ಕಾರ್ಯಕ್ರಮಗಳಲ್ಲಿ ಎಲ್ಲರೂ ಜನಹಿತ ಗಮನದಲ್ಲಿಟ್ಟುಕೊಂಡುಕಾರ್ಯನಿರ್ವಹಿಸಬೇಕು. ಜಾತಿಭೇದ,ಪಕ್ಷವನ್ನು ಮರೆತು ಕಾಮಗಾರಿಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಬೇಕು. ಗುಣಮಟ್ಟ ಕಾಪಾಡಿಕೊಳ್ಳಬೇಕುಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಸ್ಮಾರ್ಟ್‌ಸಿಟಿಯೋಜನೆ ಎರಡನೇ ಹಂತದಲ್ಲಿ ಮಂಜೂರಾಗಿದ್ದರೂ ದೇಶದಲ್ಲಿ 18ನೇ,ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ. ಕಾಮಗಾರಿಗಳುಇನ್ನಷ್ಟು ವೇಗಪಡೆಯಬೇಕು.ಉತ್ತಮ ಕೆಲಸಗಳ ಮೂಲಕಉನ್ನತ ಸ್ಥಾನ ಪಡೆಯಬೇಕು.ಕಾಮಗಾರಿಗಳು ಕಾಲಮಿತಿಯಒಳಗೆ ಪೂರ್ಣಗೊಳ್ಳಬೇಕು. ಕಾಮಗಾರಿಯ ಮಧ್ಯೆ ಕೈಕೊಟ್ಟು ಹೋಗುವ ಗುತ್ತಿಗೆದಾರರನ್ನು ದೂರವಿಟ್ಟು ಶಾಶ್ವತ ಕೆಲಸಮಾಡುವವರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಮಾತನಾಡಿ, ಕಾಮಗಾರಿ ನಡೆಯುವಾಗ ವಿವಿಧ ಇಲಾಖೆಗಳ ಮಧ್ಯೆಹೊಂದಾಣಿಕೆ ಇರಬೇಕು. ಪಕ್ಷಭೇದಮರೆತು ಶಿವಮೊಗ್ಗದಲ್ಲಿ ಕೆಲಸ ನಡೆಯುತ್ತಿದೆ. ನಗರದ ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಎಲ್ಲ ಪಾಲಿಕೆ ಸದಸ್ಯರು ಉತ್ತಮ ಸಹಕಾರನೀಡುತ್ತಿದ್ದಾರೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಪಾಲಿಕೆ ಮೇಯರ್ ಸುವರ್ಣಾಶಂಕರ್, ಉಪ ಮೇಯರ್ಸುರೇಖಾ ಮುರಳೀಧರ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಶಾಸಕ ಕೆ.ಬಿ.ಅಶೋಕನಾಯ್ಕ್, ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಪ್ರಾಸ್ತಾವಿಕ ಮಾತನಾಡಿದರು. ವಾರ್ತಾ ಇಲಾಖೆಅಧಿಕಾರಿ ಆರ್.ಮಾರುತಿ ಸ್ವಾಗತಿಸಿದರು.

ಕಾರ್ಯಕ್ರಮಕ್ಕೂ ಮೊದಲು ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಕೆ.ಎಸ್.ಈಶ್ವರಪ್ಪ ಅವರು ನಗರ ಪಾಲಿಕೆ ವ್ಯಾಪ್ತಿಯ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಹಲವು ಉದ್ಯಾನಗಳನ್ನು ಉದ್ಘಾಟಿಸಿದರು.

ಖಾಸಗಿ ಬಸ್ ನಿಲ್ದಾಣದ ಹತ್ತಿರ ಬೀದಿಬದಿ ವ್ಯಾಪಾರಿಗಳ ವಲಯ, ಅಮೃತ ಯೋಜನೆಯಲ್ಲಿ ಬೊಮ್ಮನಕಟ್ಟೆಯಿಂದ ಬಸವೇಶ್ವರ ನಗರದವೆರೆಗೆ ನಿರ್ಮಾಣವಾದರಾಜಕಾಲುವೆಗೆ ಶಿಲಾನ್ಯಾಸ ನೆರವೇರಿಸಿದರು.ನಗರಕುಟುಂಬ ಕಲ್ಯಾಣ ಆಸ್ಪತ್ರೆಯ ಮುಂಭಾಗದಲ್ಲಿ ಸಿದ್ಧವಾಗಿರುವ ಉದ್ಯಾನ,ವಿನೋಬನಗರದ ಡಿವಿಜಿ ಪಾರ್ಕ್‌, ಸಾರ್ವಜನಿಕ ಗ್ರಂಥಾಲಯದಲ್ಲಿನ ಇ-ಗ್ರಂಥಾಲಯ, ಜಯನಗರ ಬಡಾವಣೆಯ ಐದುಕನ್ಸರ್‌ವೆನ್ಸಿಸಾಲುಗಳನ್ನು ಉದ್ಘಾಟಿಸಿದರು.

ಶಿವಪ್ಪನಾಯಕ ಅವರಮನೆ ವೀಕ್ಷಿಸಿದ ಸಚಿವತ್ರಯರು ಅರಮನೆಯ ಪುನರುಜ್ಜೀವನ, ಮರುಬಳಕೆ ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT