ಶಿವಮೊಗ್ಗ: ಕೊರೊನಾ ಮೊದಲ ಲಾಕ್‌ಡೌನ್ ವೇಳೆ ಮುಚ್ಚಿದಂತಹ ಅಂಗನವಾಡಿ ಕೇಂದ್ರಗಳು ಒಂದೂವರೆ ವರ್ಷದ ಬಳಿಕ ಸೋಮವಾರದಿಂದ ಆರಂಭಗೊಂಡಿವೆ.

ಕೊರೊನಾ ಕಾರಣ ಒಂದೂವರೆ ವರ್ಷದಿಂದ ಅಂಗನವಾಡಿ ಕೇಂದ್ರಗಳು ಸ್ಥಗಿತವಾಗಿದ್ದವು. ಲಾಕ್‌ಡೌನ್ ಮತ್ತು ನಂತರದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಹಾಗೂ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸಿದ್ದರು. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ಜಿಲ್ಲೆಯಲ್ಲಿ 2,458 ಅಂಗನವಾಡಿ ಕೇಂದ್ರಗಳಿವೆ. 1,891 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದ 567 ಕಟ್ಟಡಗಳಿಗೆ ಸ್ವಂತ ಸೂರಿಲ್ಲ. ಪಂಚಾಯಿತಿ ಕಟ್ಟಡಗಳಲ್ಲಿ 31, ಶಾಲಾ ಕಟ್ಟಡಗಳಲ್ಲಿ 137, ಸಮುದಾಯ ಭವನದಲ್ಲಿ 58, ಬಾಡಿಗೆ ಕಟ್ಟಡಗಳಲ್ಲಿ 238 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಮಕ್ಕಳಿಗೆ ಸಿಹಿ ವಿತರಿಸಿದ ಪಾಲಿಕೆ ಸದಸ್ಯೆ: ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಮೂರು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬಂದ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಮಕ್ಕಳಿಗೆ ಸಿಹಿ ವಿತರಿಸಿ ಸ್ವಾಗತಿಸಿದರು.

ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಪೋಷಕರು ಭಯಪಡುವ ಅವಶ್ಯಕತೆಯಿಲ್ಲ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದು, ಪಾಠಪ್ರವಚನ ನಡೆಯಲಿದೆ ಎಂದು ರೇಖಾ ರಂಗನಾಥ್ ತಿಳಿಸಿದರು.

ಯುವ ಮುಖಂಡರಾದ ಕೆ. ರಂಗನಾಥ್, ವಜ್ರೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಸೋಮೇಶ್, ಅಂಗನವಾಡಿ ಕೇಂದ್ರದ ಶಾಂತ ಸಮಾಧಾನ, ಗೌರಮ್ಮ, ಮಕ್ಕಳ ಪೋಷಕರು ಶಿವು ವಿನಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.