ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಎಂಎಸ್ಸಿ ರಸಾಯನ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶಿವಮೊಗ್ಗದ ಆರ್.ಅರ್ಪಿತಾ ಮೊದಲ ರ‍್ಯಾಂಕ್ ಪಡೆದಿದ್ದಾರೆ.
ನಗರದ ನಿವಾಸಿ ಕೆ.ಆರ್.ರಾಮು ಹಾಗೂ ಟಿ.ಎನ್.ಆಶಾ ದಂಪತಿ ಪುತ್ರಿ ಅರ್ಪಿತಾ ಶೇ 82.8 ಅಂಕಗಳೊಂದಿಗೆ ಮೊದಲ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಎಂಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಮೊದಲ 10 ರ‍್ಯಾಂಕ್‌ಗಳ ಪೈಕಿ ಐದು ಸ್ಥಾನಗಳನ್ನು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ರಸಾಯನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಡೆದಿದ್ದಾರೆ.
ಕ್ರಮವಾಗಿ ಆರ್.ಅರ್ಪಿತಾ, ಬಿ.ಟಿ.ತೇಜಸ್ವಿನಿ, ಜೆ.ಯು.ಅರ್ಪಿತಾ, ನಾಝಿಯಾ ಫಿರ್ದೋಸ್ ಹಾಗೂ ಎಂ.ಎ.ಸ್ನೇಹಾ ಮೊದಲ ಐದು ರ‍್ಯಾಂಕ್‌ಗಳನ್ನು ಮುಡಿಗೇರಿಸಿಕೊಂಡಿದ್ದಾರೆ.