ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರ್ಷನ ಕುಟುಂಬಕ್ಕೆ ಹರಿದುಬಂತು ₹ 50 ಲಕ್ಷಕ್ಕೂ ಹೆಚ್ಚು ಹಣ

Published : 23 ಫೆಬ್ರುವರಿ 2022, 19:36 IST
ಫಾಲೋ ಮಾಡಿ
Comments

ಶಿವಮೊಗ್ಗ: ಮೃತ ಹರ್ಷ ಅವರ ಕುಟುಂಬಕ್ಕೆ ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ನೆರವು ಹರಿದುಬರುತ್ತಿದೆ. ಬಹುತೇಕರು ಮೃತರ ತಾಯಿ ಪದ್ಮಾ ಅವರ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಖಾತೆಗೆ ಹಣ ನೀಡುತ್ತಿದ್ದಾರೆ. ಕೆಲವರು ಹರ್ಷ ಅವರ ಖಾತೆಗೆ ಜಮೆ ಮಾಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ₹ 10 ಲಕ್ಷ, ಬಿಜೆಪಿ ಯುವ ಮೋರ್ಚಾ ₹ 5 ಲಕ್ಷ, ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರು ತಮ್ಮ ಫೌಂಡೇಷನ್‌ನಿಂದ ₹ 10 ಲಕ್ಷ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ₹ 6 ಲಕ್ಷ ಸೇರಿ ಹಲವರು ನೆರವು ನೀಡಿದ್ದಾರೆ.

ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್ ತಲಾ ₹ 2 ಲಕ್ಷ ಸೇರಿದಂತೆ ಇದುವರೆಗೂ ₹ 50 ಲಕ್ಷಕ್ಕೂ ಹೆಚ್ಚು ನೆರವು ಹರಿದುಬಂದಿದೆ. ಇನ್ನಷ್ಟು ನೆರವು ದೊರಕುವ ನಿರೀಕ್ಷೆ ಇದೆ. ಹರ್ಷ ಅವರ ತಂದೆ ನಾಗರಾಜ್ ಟೈಲರಿಂಗ್‌ ವೃತ್ತಿ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಇಬ್ಬರೂ ಸಹೋದರಿಯರ ಮದುವೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT