ಭಾನುವಾರ, ಆಗಸ್ಟ್ 1, 2021
20 °C

ಶಿವಮೊಗ್ಗ | ನಗರದ ಹಲವೆಡೆ ರಾಜಾಕಾಲುವೆಗಳ ಹೂಳು ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಿಂದಿನ ವರ್ಷ ತುಂಗಾ ಪ್ರವಾಹದ ಪರಿಣಾಮದ ಪಾಠ ಕಲಿತಿರುವ ನಗರ ಪಾಲಿಕೆ ಆಡಳಿತ ರಾಜಾಕಾಲುವೆಗಳ ಹೂಳು ತೆಗೆದಸಲು ಮುಂದಾಗಿದೆ. 

ಪಾಲಿಕೆ ವ್ಯಾಪ್ತಿಯ 24 ವಾರ್ಡುಗಳ ಸುಮಾರು 23 ಭಾಗಗಳಲ್ಲಿ ₨ 72 ಲಕ್ಷ ವೆಚ್ಚದಲ್ಲಿ ರಾಜಕಾಲುವೆ ಹೂಳೆತ್ತುವ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. 

ಮೇಯರ್ ಸುವರ್ಣಾ ಶಂಕರ್ ನೇತೃತ್ವದಲ್ಲಿ ಶುಕ್ರವಾರ ಪಾಲಿಕೆ ಅಧಿಕಾರಿಗಳು, ಸದಸ್ಯರ ತಂಡ ಚಾಲುಕ್ಯ ನಗರ, ಕುಂಬಾರಗುಂಡಿ, ಸೀಗೆಹಟ್ಟಿ, ಇಮಾಮ್‌ ಬಾಡ, ಗಂಧರ್ವ ನಗರ, ಚಾಲುಕ್ಯ ನಗರಗಳಿಗೆ ಭೇಟಿ ನೀ ಹೂಳೆತ್ತುವ ಕಾಮಗಾರಿ ವೀಕ್ಷಿಸಿತು. ಈ ಬಾರಿ ಎಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳವಂತೆ ಮೇಯರ್ ಸೂಚಿಸಿದರು.

ಉಪ ಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷ ನಾಯಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಶಂಕರ್ ನಾಯ್ಕ್, ಪ್ರಭು, ರಾಮೇಶ್, ಶಬಾನಾ ಖಾನಂ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು