ಶಿವಮೊಗ್ಗ: ಕಬ್ಬಿಗೆ ನ್ಯಾಯಯುತ ಬೆಲೆ ಕೊಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಶುಕ್ರವಾರ ಸೀನಪ್ಪಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸಭೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಮಾತನಾಡಿ, ಅತಿವೃಷ್ಟಿಯಿಂದ ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ನೊಂದ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಅಲ್ಪ-ಸ್ವಲ್ಪ ಬೆಳೆದ ಬೆಳೆಗೂ ಬೆಂಬಲಬೆಲೆ, ಖರೀದಿ ಕೇಂದ್ರದ ಸೌಲಭ್ಯ ಸಿಗದೆ ರೈತ ಹೈರಾಣಾಗಿದ್ದಾರೆ ಎಂದರು.

ರೈತರ ಸಂಕಷ್ಟ ಪರಿಹರಿಸುವುದು ಬಿಟ್ಟು ಸಿಎಂ ಹಾಗೂ ಡಿಸಿಎಂ ಪರಸ್ಪರ ವಾಗ್ಯುದ್ಧದಲ್ಲಿ ತೊಡಗಿದ್ದಾರೆ. ಕುರ್ಚಿ ಕಾದಾಟದಲ್ಲಿ ಈ ಸರ್ಕಾರ ರೈತರನ್ನೇ ಮರೆತಿದೆ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಕಲಬುರಗಿ ವಿಭಾಗದಲ್ಲಿ ಅತಿವೃಷ್ಟಿಯಿಂದ ತೊಗರಿಬೆಳೆ ನಾಶವಾಗಿದೆ. ರೈತರ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಶುಂಠಿ ಬೆಳೆಗೆ ಎಲೆಚುಕ್ಕಿ ರೋಗ ಬಂದಿದ್ದು, ಇದು ಕೂಡ ರೈತರಿಗೆ ಹೆಚ್ಚಿನ ನಷ್ಟವುಂಟು ಮಾಡಿದೆ. ಕೃಷಿಮಂತ್ರಿ ಕಾಣೆಯಾಗಿದ್ದಾರೆ. ಸರ್ಕಾರ ನಿಷ್ಕ್ರಿಯವಾಗಿದೆ ಎಂದರು.

ರೈತರಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ ಕೃಷಿ ಪಂಪ್ಸೆಟ್ಗಳಿಗೆ ಕಳಪೆ ಗುಣಮಟ್ಟದ ವಿದ್ಯುತ್ ಪೂರೈಕೆಯಿಂದ ಮತ್ತು ಲೋ ವೋಲ್ಟೇಜ್ನಿಂದಾಗಿ ರೈತರ ಪಂಪ್ಸೆಟ್ ಸುಟ್ಟು ಹೋಗುತ್ತಿವೆ. ಸರ್ಕಾರ ಕನಿಷ್ಠ ಏಳು ಗಂಟೆ ಕೃಷಿಗೆ ನಿಗದಿತ ಸಮಯದಲ್ಲಿ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಬೇಕು, ಕೆರೆಕಟ್ಟೆಗಳ ಹೂಳೆತ್ತುವ ಕೆಲಸ ಆರಂಭಿಸಬೇಕು ಎಂದು ಆಗ್ರಹಿಸಿದರು.

ಅಡಿಕೆಗೆ ಕೊಳೆರೋಗ ಹಾವಳಿ ಹೆಚ್ಚಾಗಿದೆ. ಹಾನಿಯ ಸಮೀಕ್ಷೆ ನಡೆಸಿ, ನಷ್ಟಪರಿಹಾರ ನೀಡಬೇಕು. ಬೆಳೆಗಾರರಿಗೆ ವೈಜ್ಞಾನಿಕ, ತಾಂತ್ರಿಕ ನೆರವು ನೀಡಿ ಅಡಿಕೆ ರೋಗ ನಿಯಂತ್ರಣಕ್ಕೆ ಒತ್ತು ಕೊಡಬೇಕು. ಭತ್ತ, ಜೋಳ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರಗಳ ಹೆಚ್ಚಿಸಬೇಕು. ಕಾಡಾನೆ, ಹಂದಿ ಇತರೆ ವನ್ಯಜೀವಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಂಡು ಬೆಳೆಹಾನಿಗೆ ಪರಿಹಾರ ವಿತರಿಸಬೇಕು. ಈ ಸಮಸ್ಯೆಗಳ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಪ್ರಾರಂಭವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಕೃಷಿಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಲಿಂಗಪ್ಪ, ಪ್ರಮುಖರಾದ ಮೋಹನರೆಡ್ಡಿ, ಮಾಲತೇಶ್, ಶಿವರಾಜ್, ಗಣೇಶ್ ಬಿಳಿಕಿ, ಕುಮಾರ್ ನಾಯ್ಡು, ಮಹೇಶ್, ಸುರೇಶ್, ಮಲ್ಲಿಕಾರ್ಜುನ್, ಬಳ್ಳೇಕೆರೆ ಸಂತೋಷ್, ಗಾಯಿತ್ರಿ ಮಲ್ಲಪ್ಪ, ಪ್ರಭಾಕರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.