ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿಗಮದ ಮನೆಗಳ ನಿರ್ಮಾಣಕ್ಕೆ ಚಾಲನೆ

Last Updated 3 ಅಕ್ಟೋಬರ್ 2020, 13:14 IST
ಅಕ್ಷರ ಗಾತ್ರ

ಶಿವಮೊಗ್ಗ:ಮಲ್ಲಿಕಾರ್ಜುನ ನಗರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮ ನಿರ್ಮಿಸುತ್ತಿರುವ ಮೊದಲ ಮನೆಗೆ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ಶನಿವಾರಗುದ್ದಲಿ ಪೂಜೆ ನೆರವೇರಿಸಿದರು.

ಪಾಲಿಕೆ ವ್ಯಾಪ್ತಿಯ ನಾಲ್ಕನೇ ವಾರ್ಡಿನಲ್ಲಿ ಸುಮಾರು ಮೂರೂವರೆ ಚದರ ಅಡಿಯಲ್ಲಿ₹ 5 ಲಕ್ಷ ವೆಚ್ಚದಂತೆ 100 ಮನೆಗಳನ್ನು ಕಟ್ಟಲಾಗುತ್ತಿದೆ. ₹ 5 ಕೋಟಿ ಮೀಸಲಿಡಲಾಗಿದೆ.ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರ ₹ 1.20ಲಕ್ಷ,ರಾಜ್ಯ ಸರ್ಕಾರದಿಂದ₹ 2 ಲಕ್ಷ, ಸಾಲದ ಮುಖಾಂತರ ₹ 1.60 ಲಕ್ಷ ಕೊಡಲಾಗುವುದು ಹಾಗೂ ಫಲಾನುಭವಿಗಳಿಂದ ₹ 73 ಸಾವಿರ ಸಂಗ್ರಹಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೇಂದ್ರ ಸರ್ಕಾರ₹ 1.50ಲಕ್ಷ, ರಾಜ್ಯ ಸರ್ಕಾರದಿಂದ ₹ 2 ಲಕ್ಷ, ಸಾಲದ ರೂಪದಲ್ಲಿ ₹ 78 ಸಾವಿರ ಕೊಡಲಾಗುವುದು ಹಾಗೂ ಫಲಾನುಭವಿಗಳಿಂದ ₹50 ಸಾವಿರ ಗಳಂತೆ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ, ಮುಖಂಡರಾದ ನಳಿನಾ, ಬಾಬು, ಮನೆ ನಿರ್ಮಾಣದ ಗುತ್ತಿಗೆದಾರರಾದ ವಿಜಯ್, ಭರತ್‌ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT