ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆ: 24,243 ವಿದ್ಯಾರ್ಥಿಗಳಿಗೆ 1,252 ಕೊಠಡಿ

ವಿದ್ಯಾರ್ಥಿಗಳ ಸೇವೆಗೆ 350ಕ್ಕೂ ಹೆಚ್ಚು ಬಸ್‌ಗಳು, ಸುರಕ್ಷತೆಗೆ ಆರೋಗ್ಯ ಸಿಬ್ಬಂದಿ ನಿಯೋಜನೆ
Last Updated 16 ಜೂನ್ 2020, 16:16 IST
ಅಕ್ಷರ ಗಾತ್ರ

ಶಿವಮೊಗ್ಗ:ಜಿಲ್ಲೆಯ84 ಪರೀಕ್ಷಾ ಕೇಂದ್ರಗಳಲ್ಲೂಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ.ಜೂನ್ 25ರಿಂದ ಜುಲೈ 4ರವರೆಗೆಪರೀಕ್ಷೆಗಳು ನಡೆಯಲಿದ್ದು,ಕೊರೊನಾಸೋಂಕು ಹರಡದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಂ.ರಮೇಶ್ ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 12,287 ವಿದ್ಯಾರ್ಥಿಗಳುಹಾಗೂ 11,956 ವಿದ್ಯಾರ್ಥಿನಿಯರು ಸೇರಿ 24,243ಮಂದಿಪರೀಕ್ಷೆತೆಗೆದುಕೊಂಡಿದ್ದಾರೆ. ಭದ್ರಾವತಿ ತಾಲ್ಲೂಕಿನ 4,607, ಹೊಸನಗರ 1,629, ಸಾಗರ2,878, ಶಿಕಾರಿಪುರ 3,697, ಶಿವಮೊಗ್ಗ 7164, ಸೊರಬ 2578 ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ1,690 ವಿದ್ಯಾರ್ಥಿಗಳು ಇದ್ದಾರೆಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರೀಕ್ಷೆ ನಡೆಸಲು ಈ ಹಿಂದೆ 1,050 ಕೊಠಡಿಗಳನ್ನು ನಿಗದಿಪಡಿಸಲಾಗಿತ್ತು. ಪ್ರಸ್ತುತ ಅಂತರ ಕಾಪಾಡಿಕೊಳ್ಳಲೇಬೇಕಾದ ಕಾರಣ ಹೆಚ್ಚುವರಿ 202 ಕೊಠಡಿಗಳು ಸೇರಿದಂತೆ ಒಟ್ಟು 84 ಪರೀಕ್ಷಾ ಕೇಂದ್ರಗಳಲ್ಲಿ 1,252 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.ವಿಶೇಷ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೊಠಡಿಗೆ ಗರಿಷ್ಠ 20 ವಿದ್ಯಾರ್ಥಿಗಳಿಗೆಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲೆಯ ಎಂಟು ಕಂಟ್ಮೆಂಟ್‌ ಜೋನ್‌ಗಳಲ್ಲಿಪರೀಕ್ಷೆಗೆ ಹಾಜರಾಗುವ 250 ವಿದ್ಯಾರ್ಥಿಗಳಿಗಾಗಿವಿಶೇಷ ಕೊಠಡಿ ಸ್ಥಾಪಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಸಾಮಾನ್ಯ ಅಂತರಕ್ಕಿಂತ ಹೆಚ್ಚಿನ ಅಂತರದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಒಂದು ಗಂಟೆ ಮೊದಲುಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು.ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಾಥಮಿಕ ತಪಾಸಣೆಗೆನಡೆಸುವರು.ಪ್ರತಿ ವಿದ್ಯಾರ್ಥಿಗಳಿಗೆಸ್ವಯಂ ಸೇವಾ ಸಂಸ್ಥೆಗಳು ನೀಡಿರುವ 2 ಮಾಸ್ಕ್ ಹಾಗೂ ದೈನಂದಿನ ಬಳಕೆಗೆ ಸ್ಯಾನಿಟೈಜರ್ ನೀಡಲಾಗಿದೆ. ವಿದ್ಯಾರ್ಥಿಗಳೇಕುಡಿಯುವ ನೀರು ಹಾಗೂ ಅಗತ್ಯದ ಉಪಹಾರವ ತರುವಂತೆ ಸೂಚಿಸಲಾಗಿದೆ. ದೂರದ ಊರಿನಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಸ್ಕೆಟ್‌,ಕುಡಿಯುವ ನೀರುಒದಗಿಸಲಾಗುವುದು. ವ್ಯವಸ್ಥಿತ ನಿರ್ವಹಣೆಗಾಗಿ ಸ್ಕೌಟ್ ಮತ್ತು ಗೈಡ್ಸ್‌ನ375 ಸ್ವಯಂ ಸೇವಕರ ಸೇವೆ ಪಡೆಯಲಾಗುತ್ತಿದೆ ಎಂದು ವಿವರ ನೀಡಿದರು.

ವಿದ್ಯಾರ್ಥಿಗೆರಾಜ್ಯದ ಯಾವುದೇ ಸ್ಥಳದಲ್ಲಿಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಶಿವಮೊಗ್ಗ ಜಿಲ್ಲೆಯ 743 ವಿದ್ಯಾರ್ಥಿಗಳುಹೊರಜಿಲ್ಲೆಗಳಲ್ಲಿ ಹಾಗೂ ಹೊರಜಿಲ್ಲೆಯ 668 ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ.ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಹಾಸ್ಟೆಲ್‌ನ 586 ವಿದ್ಯಾರ್ಥಿಗಳಿಗೆತಾತ್ಕಾಲಿಕ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಮಕ್ಕಳೊಂದಿಗೆ ಪೋಷಕರು ತಂಗುವ ಅವಕಾಶ ಕಲ್ಪಿಸಲಾಗಿದೆ.ಅಗತ್ಯ ಸೌಲಭ್ಯಗಳನ್ನು ಬಳಸಿಕೊಂಡು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿಮತ್ತೊಮ್ಮೆ ಪುನರ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT