ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ವಂಚನೆ: ಇಬ್ಬರ ಬಂಧನ

Last Updated 3 ಡಿಸೆಂಬರ್ 2020, 13:57 IST
ಅಕ್ಷರ ಗಾತ್ರ

ತ್ಯಾಗರ್ತಿ: ಸಮೀಪದ ಚಿಕ್ಕಬಿಲಗುಂಜಿಯಲ್ಲಿ ಬುಧವಾರ ಅಂಗವಿಕಲರಿಗೆ ಮನೆ ನಿರ್ಮಾಣ ಸಹಾಯಧನ ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರು ಅಂತರ ಜಿಲ್ಲಾ ವಂಚಕರನ್ನು ಪೊಲೀಸರು ಬಂಧಿಸಿದರು.

ಹರಿಹರ ತಾಲ್ಲೂಕಿನ ನವೀನ್ ಹಾಗೂ ಕರಿಬಸಪ್ಪ ಎಂಬುವವರು ಅಂಗವಿಕಲರನ್ನೇ ಟಾರ್ಗೆಟ್‌ ಮಾಡಿ ಮನೆ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರದಿಂದ ₹ 12 ಲಕ್ಷ ಸಹಾಯಧನ ಕೊಡಿಸುವುದಾಗಿ ನಂಬಿಸುತ್ತಿದ್ದರು. ಸಹಾಯಧನಕ್ಕೆ ₹ 9 ಸಾವಿರ ಖರ್ಚಾಗುತ್ತದೆ ಎಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾಗ ಚಿಕ್ಕಬಿಲಗುಂಜಿ ಗ್ರಾಮಸ್ಥರು ಹಿಡಿದು ಸಾಗರ ಗ್ರಾಮಾಂತರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೆಮನೆ ಗ್ರಾಮದಲ್ಲಿ ಅಂಗವಿಕಲರೊಬ್ಬರಿಗೆ ₹ 5 ಸಾವಿರ ವಂಚಿಸಿರುವುದು ಹಾಗೂ ಅನೇಕರಿಗೆ ವಂಚಿಸಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಶೋಧರಾ, ಗ್ರಾಮಸ್ಥರಾದ ಉದ್ರೆ ಮಂಜುನಾಥ್, ಕುಶ, ಹರೀಶ, ದಿನೇಶ ವಂಚಕರನ್ನು ಬಂಧಿಸುವಲ್ಲಿ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT