ಕಾರ್ಗಲ್: ಸಮೀಪದ ಜೋಗದ ಬಳಿಯ ದೇವಿಗುಂಡಿ ಬಳಿ ಈಜಲು ಹೋಗಿ ಭಾನುವಾರ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.
ಸಾಗರದ ಕೃಷಿ ಅಧಿಕಾರಿ ಕುಮಾರ್ ಕೆ.ಟಿ. (36) ಹಾಗೂ ಐಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿ ಅರುಣ್ ಸಿ. (28) ಮೃತಪಟ್ಟವರು.
ಕುಮಾರ್ ಕೆ.ಟಿ. ಹಾಗೂ ಅರುಣ್ ಅವರು ಕುಟುಂಬ ಸಮೇತರಾಗಿ ಜೋಗ ಪ್ರವಾಸಕ್ಕೆ ಹೋಗಿದ್ದರು. ಜೋಗದ ಸಮೀಪದ ದೇವಿ ಗುಂಡಿಯಲ್ಲಿ ಈಜಲು ಹೋಗಿ ಬಿದ್ದು ಮೃತಪಟ್ಟಿದ್ದಾರೆ.
ಕಾರ್ಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.