ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗಲು ಒಪ್ಪಿದ್ದ ಮಹಿಳೆ ಚಿನ್ನದ ಜತೆ ಪರಾರಿ

Last Updated 9 ಡಿಸೆಂಬರ್ 2021, 14:45 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಪತ್ನಿ ಕಳೆದುಕೊಂಡ ನಂತರ ಮತ್ತೆ ಮದುವೆಯಾಗ ಬಯಸಿದ್ದ 60ರ ವಯೋಮಾನದ ವ್ಯಕ್ತಿಯೊಬ್ಬರು ಮದುವೆಯಾಗಲು ಒಪ್ಪಿಕೊಂಡಿದ್ದ ಮಹಿಳೆಯಿಂದಲೇ ವಂಚನೆಗೆ ಒಳಗಾಗಿದ್ದಾರೆ.

ಹೊಳೆಹೊನ್ನೂರಿನ ನಂಜುಂಡಪ್ಪ ಮೋಸ ಹೋದವರು.

ಘಟನೆ ವಿವರ: ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದು, 7 ತಿಂಗಳ ಹಿಂದೆ ಪತ್ನಿ ಕಳೆದುಕೊಂಡಿದ್ದ ಅವರಿಗೆ ಒಂಟಿತನ ಕಾಡುತ್ತಿತ್ತು. ಹೀಗಾಗಿ ಮತ್ತೆ ಮದುವೆ ಮಾಡಿಕೊಳ್ಳಲು ಕನ್ನಡ ಮ್ಯಾಟ್ರಿಮೊನಿಯಲ್ಲಿ ಹೆಸರು ನೋಂದಾಯಿಸಿದ್ದರು. ಬೆಂಗಳೂರಿನ ಯಲಹಂಕದ ಚಂದ್ರಿಕಾ ಎನ್ನುವ ಮಹಿಳೆ ನಂಜುಂಡಪ್ಪ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರು. ನ.15ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ ನಡೆದಿತ್ತು. ಊಟ ಮಾಡಿ ಬರ್ತಿನಿ ಅಂತಾ ಹೋಗಿದ್ದ ಮಹಿಳೆ ಚಿನ್ನದ ತಾಳಿಯೊಂದಿಗೆ ಪರಾರಿಯಾಗಿದ್ದಾರೆ.

ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT