ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಳಿನ ಕುಡಿ ಕಥಾ ಸಂಕಲನ ಬಿಡುಗಡೆ

Last Updated 15 ಅಕ್ಟೋಬರ್ 2012, 10:45 IST
ಅಕ್ಷರ ಗಾತ್ರ

ಸಾಗರ: ಅನುಭವಗಳನ್ನು ಭಾಷೆ ಬಳಸಿ ಕಥನಗಳ ಮೂಲಕ ಹಂಚಿಕೊಳ್ಳುವ ಕಲೆ ಪರಿಸರ ಮನುಷ್ಯನಿಗೆ ನೀಡಿರುವ ಮಹತ್ವದ ಕೊಡುಗೆ ಆಗಿದೆ ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಪ್ರಕಟಿಸಿರುವ ವಿ. ಗಣೇಶ್ ಅವರ `ಕರುಳಿನ ಕುಡಿ~ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಓರ್ವ ಲೇಖಕ ಒಂದು ಚೌಕಟ್ಟಿನೊಳಗೆ ಬಂಧಿಯಾಗಿದ್ದರೆ ವಿವಿಧ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಸಾಧ್ಯವಿಲ್ಲ. ಅನುಭವಗಳಿಗೆ ತೆರೆದುಕೊಳ್ಳಲು ಸಮಾಜದ ವಿವಿಧ ಸಮುದಾಯಗಳ ಜೊತೆಗೆ ಸದಾ ಮುಖಾಮುಖಿಯಾಗುತ್ತಲೇ ಇರಬೇಕು ಎಂದು ಹೇಳಿದರು.

ತಾವು ಕಂಡುಕೊಂಡ ಆರ್ದ್ರ ಅನುಭವಗಳನ್ನು ಕತೆಗಳ ಮೂಲಕ ಅಭಿವ್ಯಕ್ತಿಸಿ ತನ್ಮೂಲಕ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುವ ಹಲವು ಲೇಖಕರು ನಮ್ಮ ನಡುವೆ ಇದ್ದಾರೆ. ವಿ.ಗಣೇಶ್ ಅವರ ಕಥಾ ಸಂಕಲನದ ಹಿಂದೆಯೂ ಇಂತಹದ್ದೇ ಮನಸ್ಸು ಇರುವಂತೆ ಗೋಚರವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT